ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವ ಕುಂದಾಪುರ ಕನ್ನಡ ದಿನದ ಅಂಗವಾಗಿ ಮನಸು ಮೀಡಿಯಾ ಹಾಗೂ ರಾಮ ಶೆಟ್ಟಿ ಅತ್ತಿಕಾರ್ ಅವರ ಸಂಯೋಜನೆಯಲ್ಲಿ ಹಕ್ಲಾಡಿಯ ಕೆ.ಎಸ್.ಎಸ್ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ “ಕುಂದನುಡಿ” ಸ್ಪರ್ಧೆ ಆಯೋಜಿಸಲಾಗಿತ್ತು.
ಎಸ್.ಡಿಎಂಸಿ ಅದ್ಯಕ್ಷರದ ರಾಜು ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕರಾದ ಕಿಶೋರ್ ಕುಮಾರ್ ಶೆಟ್ಟಿ, ಭಾರತಿ ಹಾಗೂ ದೀಪ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಚಿತ್ರೀಕರಣ ಮನಸು ಮೀಡಿಯಾ ತಂಡದ ಸುನಿಲ್ ಗೊಳಿಹೊಳೆ ನಿರ್ವಹಿಸಿದರು ಸ್ಪರ್ಧೆಯನ್ನು ರಾಮ್ ಶೆಟ್ಟಿ ಅತ್ತೀಕರ್ ನಡೆಸಿಕೊಟ್ಟರು ಮನಸು ಮೀಡಿಯಾ ತಂಡದ ಸಚಿನ್ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿದರು.