ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಗೀತ ಮತ್ತು ಸಾಹಿತ್ಯ ನಮ್ಮನ್ನು ಮೂರ್ತ ಪ್ರಪಂಚದಿಂದ ಅಮೂರ್ತದೆಡೆಗೆ ಒಯ್ಯುವ ಮಾಧ್ಯಮಗಳು. ಸಂಗೀತ ಹ್ಲದಯವು ನಾದದೊಂದಿಗೆ ನಡೆಸುವ ಸಂವಾದ. ಅದು ನಮಗೆ ಸಂಸ್ಕಾರ ನೀಡುತ್ತದೆ ಎಂದು ಉಡುಪಿ ಎಂ.ಜಿ.ಎಂ ಕಾಲೇಜಿನ ಪ್ರಾಧ್ಯಾಪಕಿ, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು.
ಕುಂದಾಪುರದ ಗುರುಪರಂಪರಾ ಸಂಗೀತ ಸಭಾ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಸಭಾಭವನದಲ್ಲಿ ಭಾನುವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾಂತ್ರಿಕವಾಗುತ್ತಿರುವ ಬದುಕಿಗೆ ಸಂಗೀತದಂತಹ ಕಲೆಗಳ ಕಲಿಕೆ ಮತ್ತು ಆಸ್ವಾದನ, ರಸ-ಭಾವ ಅನುಭವದ ಮಾಂತ್ರಿಕ ಸ್ಪರ್ಷ ನೀಡಿ ಬದುಕನ್ನು ಸಂತಸಮಯವಾಗಿ ಮಾಡುತ್ತದೆ ಎಂದು ಅವರು ಹೇಳಿದರು.
ವಿಶೇಷ ಅಥಿತಿಯಾಗಿ ಆಗಮಿಸಿದ್ದ ಖ್ಯಾತ ಹಾರ್ಮೋನಿಯಂ ವಾದಕ ಸುಧೀರ್ ನಾಯಕ್ ಮಾತನಾಡಿ ಸಂಗೀತವು ಪರಿಶ್ರಮ ಬೇಡುವ ಕಲೆ. ಅದರ ಕಲಿಕೆಯಲ್ಲಿ ಗುರು-ಶಿಷ್ಯ ಸಂಬಂಧ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಕಲಿಕೆ ಫಲಪ್ರದವಾಗಬೇಕಾದರೆ ಸಂಗೀತದ ನಿರಂತರ ಅಭ್ಯಾಸ ಮತ್ತು ಶ್ರವಣ ನಡೆಯಬೇಕು. ಸಂಗೀತ ವ್ಯಕ್ತಿತ್ವವನ್ನು ಹದಗೊಳಿಸುತ್ತದೆ ಎಂದು ಹೇಳಿದರು.
ಭಟ್ ದಂಪತಿಯ ಶಿಷ್ಯರು ಗುರುಗಳನ್ನು ಪೂಜಿಸಿ, ಸನ್ಮಾನಿಸಿದರು. ಚಂದ್ರಿಕಾ ಧನ್ಯ ಸ್ವಾಗತಿಸಿದರು. ಪೋಷಕರಾದ ಭಾಗ್ಯಲಕ್ಷ್ಮೀ ವೈದ್ಯ, ವಿದ್ಯಾರ್ಥಿಗಳಾದ ಪೂರ್ಣಿಮಾ ಬೈಂದೂರು, ಸಂಕಲ್ಪಕುಮಾರ್, ಕೇದಾರ ಮರವಂತೆ ಅನುಭವ ಹಂಚಿಕೊಂಡರು. ನೇಹಾ ಹೊಳ್ಳ ವಂದಿಸಿದರು. ಸಂಧ್ಯಾ ನಿರೂಪಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಗೋವಿಂದ ಅಡಿಗ ಇದ್ದರು.
ಬೆಳಗ್ಗಿನಿಂದ ಸಂಜೆ ತನಕ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನುಷಾ, ವೇದಿಕಾ ಪಡಿಯಾರ್, ಪಂಚಮಿ ವೈದ್ಯ, ವೀಣಾ ನಾಯಕ್, ಜ್ಯೋತಿ ಭಟ್, ಸಾತ್ಯಕಿ, ಅದಿತಿ ಭಂಡಾರ್‌ಕಾರ್, ಕೇದಾರ ಮರವಂತೆ, ಜಾಹ್ನವಿ ಪ್ರಭು, ಪೂರ್ಣಿಮಾ, ಮೇದಿನಿ, ಚಿನ್ಮಯಿ ಧನ್ಯ, ಶ್ವೇತಾ, ಸಭ್ಯಾ, ಸಂಕಲ್ಪಕುಮಾರ್, ನಾಗರಾಜ ಭಟ್, ಸಂಜನಾ, ಈಶ್ವರಿ, ಚಿಂತನಾ ಧನ್ಯ, ಶಮಾ ಸೋಮಯಾಜಿ, ನೇಹಾ ಹೊಳ್ಳ ಹಿಂದುಸ್ಥಾನಿ ಸಂಗೀತದ ವಿವಿಧ ರಾಗಗಳನ್ನು ಪ್ರಸ್ತುತಪಡಿಸಿದರು. ಶಶಿಕಿರಣ್ ಮಣಿಪಾಲ, ವಿಘ್ನೇಶ ಕಾಮತ್, ಪ್ರಸಾದ್ ಕಾಮತ್, ಶ್ರೀಧರ ಭಟ್ ಮತ್ತು ಗುರುದಂಪತಿ ಹಾರ್ಮೋನಿಯಂ, ತಬಲಾ ಸಾಥ್ ನೀಡಿದರು.