ಕೋಟೇಶ್ವರ: ನಡೆದಾಡುವ ಹಾದಿಗೆ ತಡೆ ತೆರವುಗೊಳಿಸಲು ಆಗ್ರಹ

Call us

Call us

Call us

ಕುಂದಾಪುರ: ಕೋಟೇಶ್ವರ ಗ್ರಾಮದ ಐತಾಳಬೆಟ್ಟು ಉದ್ದಿನಕೆರೆ ಪರಿಸರದಲ್ಲಿ ಅನಾದಿಯಿಂದಲೂ ನಡೆದಾಡುವ ಹಾದಿಗೆ ತಡೆಯೊಡ್ಡಲಾಗಿದ್ದು, ಪರಿಶಿಷ್ಟ ಜಾತಿ ಸೇರಿದಂತೆ ನೂರಾರು ನಾಗರಿಕರು ದಿಗ್ಬಂಧನಕ್ಕೊಳಗಾಗಿದ್ದಾರೆ. ಸರಕಾರಿ ಸ್ಥಳ ಸರ್ವೆ ನಂಬ್ರ 162.1ಎ1ಸಿ ವಿಸ್ತೀರ್ಣ 0.02, ಸ.ನಂಬ್ರ 163.1ಸಿ2ಬಿ ವಿಸ್ತೀರ್ಣ 0..05 ಸ.ನಂಬ್ರ 163.1ಸಿ3 ವಿಸ್ತೀರ್ಣ 0.04.೦೪, ಸ.ನಂಬ್ರ 163.1ಸಿ1ಸಿ ವಿಸ್ತೀರ್ಣ 0.05 ಸ.ನಂಬ್ರ 170.1 ವಿಸ್ತೀರ್ಣ 0.06೫ ಎಕ್ರೆಗಳನ್ನು ಅತಿಕ್ರಮಣ ಮಾಡಲಾಗಿರುವುದನ್ನು ತೆರವುಗೊಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಖಾಸಗಿ ವ್ಯಕ್ತಿಯೊಬ್ಬರು ಪರಂಬೋಕು ಸ್ಥಳಕ್ಕೆ ತಡೆಯೊಡ್ಡಿದ್ದರೂ, ಸ್ಥಳೀಯ ಪಂಚಾಯತ್ ಹಾಗೂ ಕಂದಾಯ ಇಲಾಖೆ ಮೌನ ವಹಿಸಿದೇ ಎಂದು ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕರಿಯದೇವಾಡಿಗ ಆರೋಪಿಸಿದ್ದಾರೆ.

Call us

Click Here

ನಡೆದಾಡುವ ಹಾದಿಗೆ ತಡೆ ಉಂಟು ಮಾಡಿದ ಬಗ್ಗೆ ತಹಶೀಲ್ದಾರ್ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದರೂ ಯಾವುದೇ ಕ್ರಮ ನಡೆದಿಲ್ಲ. ತಡೆಯೊಡ್ಡಿದ ಸ್ಥಳದಿಂದ 3 ಕಿ.ಮೀ. ದೂರದಿಂದ ಜನರು ದೈನಂದಿನ ಅಗತ್ಯಕ್ಕಾಗಿ ಬರುವುದು ತಪ್ಪಿಹೋಗಿದೆ. ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಸಾಗಬೇಕಾಗಿದೆ. ನಾಗರಿಕರು ಕಾನೂನು ಕೈಗೆತ್ತಿಕೊಳ್ಳುವ ಮೊದಲು ಆಡಳಿತ ಸೌಹಾರ್ಧ ವಾತಾವರಣ ಮೂಡಿಸಬೇಕು ಎಂದು ಅವರು ಒತ್ತಾಯಿಸಿದರು. ಮಳೆ ನೀರು ಪರಿಸರದ ಮನೆಗಳಿಗೆ ನುಗ್ಗುತ್ತಿದೆ. ನಡೆದಾಡುವ ಹಾದಿ, ನೀರು ಹರಿಯುವ ತೋಡು ಒತ್ತೊಟ್ಟಿಗಿದೆ. ಕುಡಿಯುವ ನೀರು, ಸಾರ್ವಜನಿಕ ಹಾದಿಗೆ ಭಂಗ ಉಂಟು ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟು ಆದೇಶಿಸಿದೆ. ನೂರಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ ಆರೇಳು ವರ್ಷದಿಂದ ಈ ಕುರಿತು ಹೋರಾಟ ನಡೆಸುತ್ತಿದ್ದು, ಸರಕಾರಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕರಿಯ ದೇವಾಡಿಗ ಸರಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ನಡೆದಾಡುವ ಹಾದಿ ತೆರವುಗೊಳಿಸುವ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.

Leave a Reply