ಹಂಗಳೂರು : ಆದಿತ್ಯ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

Click Here

Call us

Call us

Call us

ಕುಂದಾಪುರ: ಆದಿತ್ಯ ವಿವಿಧೋದ್ದೇಶ ಸಹಕಾರಿ ಸಂಘ ನಿ., ಹಂಗಳೂರು ಇದರ 2014-15ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕಛೇರಿಯಲ್ಲಿ ಜರುಗಿತು.

Call us

Click Here

ಸಂಘದ ಅಧ್ಯಕ್ಷರಾದ ರಾಜೇಂದ್ರ ಹೆಗ್ಡೆ 2014-15ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸುತ್ತಾ ವರದಿ ವರ್ಷದಲ್ಲಿ ರೂಪಾಯಿ 8.50 ಕೋಟಿ ವ್ಯವಹಾರ ಮಾಡಿದ್ದು ನಿವ್ವಳ ಲಾಭದಿಂದ ಸದಸ್ಯರಿಗೆ ಶೇ. 8.50 ಡಿವಿಡೆಂಡ್ ಹಂಚಲಾಗಿದೆ. ಮುಂದಿನ ಸಾಲಿಗೆ ಶೇ. 15.00 ಡಿವಿಡೆಂಡ್ ನೀಡಲಿದ್ದೇವೆ. ಹಾಗೂ ಸಂಘವು 2ನೇ ವರ್ಷದಲ್ಲಿಯೇ ಉತ್ತಮ ’ಎ’ ತರಗತಿಯ ಸಂಸ್ಥೆಯಾಗಿರುವುದಕ್ಕೆ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ವ್ಯವಸ್ಥಾಪಕರಾದ ನಾರಾಯಣ ಬಿಲ್ಲವ ಮಾತನಾಡಿ 2014-15ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಹಾಗೂ ಆಯ ವ್ಯಯ, ಲಾಭ ನಷ್ಟ, ಆಸ್ತಿ ಜವಾಬ್ದಾರಿ ಮತ್ತು ಮುಂದಿನ ವರ್ಷದ ಅಂದಾಜು ಆಯ ವ್ಯಯವನ್ನು ಸಭೆಯಲ್ಲಿ ಮಂಡಿಸಿ ಮಂಜೂರಾತಿ ಪಡೆದರು.

ಸಂಘದ ಉಪಾಧ್ಯಕ್ಷರಾದ ವಿ.ದಿನೇಶ ದೇವಾಡಿಗ, ನಿರ್ದೇಶಕರಾದ ರತ್ನಾಕರ ಕೋಟೆಗಾರ, ಜಯರಾಮ ಶೆಟ್ಟಿ, ಸಂಜೀವ ದೇವಾಡಿಗ, ಕೃಷ್ಣ ದೇವಾಡಿಗ, ಹರೀಶ್ ಬಿಲ್ಲವ, ಉದಯ ಮೆಂಡನ್, ರವೀಂದ್ರ ಹೆಗ್ಡೆ, ಸಂತೋಷ ಕೋಣಿ, ಪ್ರಶಾಂತ್, ಜೋರ್ಜ್ ಕರ್ವೆಲ್ಲೊ, ಪ್ರವೀಣ ಕುಮಾರ್ ಕೆ.ಪಿ., ಆಶಾ ಚಂದ್ರಶೇಖರ, ವಿಜಯಲಕ್ಷ್ಮೀ, ಗಣೇಶ, ರಾಘವೇಂದ್ರ ಹೆಗ್ಡೆ, ಪ್ರವೀಣ ಕೋಟ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ವಿ.ದಿನೇಶ ದೇವಾಡಿಗರು ವಂದಿಸಿದರು.

Leave a Reply