ಗೋಳಿಹೊಳೆ: ವಿಶೇಷ ಸೋಲಾರ್ ಸೇವಾ ಶಿಬಿರ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸೋಲಾರ್ ಮಾಡೆಲ್ ವಿಲೇಜ್ ಗೋಳಿಹೊಳೆಯಲ್ಲಿ ಸೆಲ್ಕೋ ಸೋಲಾರ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಹಯೋಗದಲ್ಲಿ ವಿಶೇಷ ಸೋಲಾರ್ ಸೇವಾ ಶಿಬಿರ ಮತ್ತು ಸೋಲಾರ್ ಲೈಟ್ ಉಪಯೋಗಿಸಿಕೊಂಡು ಎಸ್‌ಎಸ್‌ಎಲ್‌ಸಿಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಗುರುತಿಸುವಿಕೆ ಕಾರ್ಯಕ್ರಮ ಸೋಮವಾರ ನಡೆಯಿತು.

Call us

Click Here

ಗೋಳಿಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಅಧ್ಯಕ್ಷತೆ ವಹಿಸಿದ್ದರು. ಎಸ್ ಕೆಡಿಆರ್‌ಡಿಪಿ ವಲಯ ಅಧ್ಯಕ್ಷ ಮಂಜು ಪೂಜಾರಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೋಳಿಹಳೆ ಶಾಖೆ ಪ್ರಬಂಧಕರಾದ ಸಂತೋಷ್, ಸಿದ್ದೇಶ್ವರ ಮರಾಠಿ ಕೋ ಆಪರೇಟಿವ್ ಸೊಸೈಟಿ ಸಿಇಓ ಉದಯ ನಾಯಕ್, ಮೂಕಾಂಬಿಕಾ ಪ್ರೌಢಶಾಲೆ ಶಿಕ್ಷಕ ಉದಯ್ ಮತ್ತು ಸೆಲ್ಕೋ ಸೋಲಾರ್ ಲೈಟ್ ಏರಿಯಾ ಮೆನೇಜರ್ ಶೇಖರ್ ಶೆಟ್ಟಿ, ಶಾಖೆ ಪ್ರಬಂಧಕ ಮಂಜುನಾಥ್ ಉಪಸ್ಥಿತರಿದ್ದರು.

ಸೆಲ್ಕೋ ಸೋಲಾರ್ ಲೈಟಿಂಗ್ ಸಿಸ್ಟಮ್ ಉಪಯೋಗಿಸಿಕೊಂಡು ಎಸ್ ಎಸ್ ಎಲ್ ಸಿ ಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಸೆಲ್ಕೋ ಸೋಲಾರ್ ಕಾರ್ಯಕ್ರಮದ ಅಡಿಯಲ್ಲಿ ಬರುವ ಫಲಾನುಭವಿಗಳಿಗೆ ಸೋಲಾರ್ ಚಾಲಿತ ಹೊಲಿಗೆ ಯಂತ್ರ ವಿತರಿಸಲಾಯಿತು.

Leave a Reply