ಸಾಲಿಗ್ರಾಮ: ರಂಗೋಲಿಯಲ್ಲಿ ಅರಳಿದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪ್ರಧಾನಮಂತ್ರಿಗಳ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷ ಹಾಗೂ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದು ವಿವಿಧ ರೂಪದಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

Call us

Click Here

ಸಾಸ್ತಾನ ನಿವಾಸಿಯಾಗಿರುವ ಉಪನ್ಯಾಸಕಿ ಸ್ಪೂರ್ತಿ ಆಚಾರ್ಯ ಹಾಗೂ ಬ್ರಹ್ಮಾವರದ ಚಿತ್ರಕಲಾವಿದ ಅಶ್ವಥ್ ಆಚಾರ್ಯ ಬೃಹತ್ ರಂಗೋಲಿಯಲ್ಲಿ ಭಾವಚಿತ್ರವನ್ನು ಬಿಡಿಸುವ ರಚಿಸುವ ಮೂಲಕ ಪ್ರಧಾನಿಗಳ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇವರಿಗೆ ಚಿತ್ರ ಕಲಾವಿದರಾದ ಆದಿತ್ಯ ಪೂಜಾರಿ ಇವರಿಗೆ ಸಹಕರಿಸಿದ್ದಾರೆ.

ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಯೋಜನೆಯಡಿ ಮಾಹಿತಿ ತಂತ್ರಜ್ಞಾನ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸ್ಪೂರ್ತಿ ಆಚಾರ್ಯ ಅವರು. ಮೊದಲ ಭಾರಿಗೆ ಪೋರ್ಟೆಲ್ ರಂಗೋಲಿ ಬಿಡಿಸಿದ್ದಾರೆ. ಅಶ್ವಥ್ ಆಚಾರ್ಯ ಪದವೀಧರ ಚಿತ್ರಕಲಾವಿರಾಗಿದ್ದಾರೆ. ಸಾಸ್ತಾನದ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ ಐದು ಬಣ್ಣಗಳ ಮಿಶ್ರಣ ಮಾಡಿ 12 ಅಡಿ ಎತ್ತರ ಹಾಗೂ 5 ಅಡಿ ಅಗಲದ ರಂಗೊಲಿಯಲ್ಲಿ ಪ್ರಧಾನಿಯ ಭಾವಚಿತ್ರವನ್ನು ಅರಳಿಸಿದ್ದಾರೆ. ಇದಕ್ಕೆ ಸುಮಾರು 15 ಗಂಟೆಗಳ ಸಮಯ ವ್ಯಯಿಸಿದ್ದಾರೆ. ಶನಿವಾರ ಸಂಜೆಯ ತನಕ ರಂಗೊಲಿ ಪ್ರದರ್ಶನವಿರಲಿದೆ.

Leave a Reply