ವಿಶ್ವಕರ್ಮ ಸಮಾಜ ಕೇವಲ ಜಾತಿಯಲ್ಲ, ಅದೊಂದು ಸಂಸ್ಕೃತಿ: ಉಪ ತಹಶೀಲ್ದಾರ್ ಭೀಮಪ್ಪ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಸೆ.17: ವಿಶ್ವಕರ್ಮ ಸಮಾಜದ ಮಹಾನ್ ಪುರುಷರು ಸಮಾಜದ ಏಳಿಗೆಗಾಗಿ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬೈಂದೂರು ಉಪ ತಹಶೀಲ್ದಾರ್ ಭೀಮಪ್ಪ ಹೇಳಿದರು.

Call us

Click Here

ಅವರು ಶನಿವಾರ ತಹಶೀಲ್ದಾರ್ ಕಚೇರಿ ವತಿಯಿಂದ ಹಾಗೂ ವಿಶ್ವಕರ್ಮ ಯುವಕ ಸಂಘ ರಿ ಬೈಂದೂರು ಇವರ ಸಹಯೋಗದೊಂದಿಗೆ ಕಚೇರಿಯ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ, ವಿಶ್ವಕರ್ಮ ಸಮಾಜದ ಜನರು ಶತಮಾನಗಳಿಂದ ಪಂಚ ಕಸುಬುಗಳ ಮೂಲಕ ದೇಶದ ಸಂಸ್ಕೃತಿ ಬಿಂಬುಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದ್ಭುತ ಕೆತ್ತನೆಯ ಮೂಲಕ ಐತಿಹಾಸಿಕ ಸ್ಮಾರಕ, ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮದ ಶಿಲ್ಪಿಗಳಿಗೆ ಸಲ್ಲುತ್ತದೆ. ವಿಶ್ವಕರ್ಮ ಸಮಾಜವು ಒಂದು ಜಾತಿಯಲ್ಲ, ಅದೊಂದು ಸಂಸ್ಕೃತಿ. ಈ ನಿಟ್ಟಿನಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಜನರಿಗೆ ಹಲವು ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೆ ತಂದಿದೆ. ವಿಶ್ವಕರ್ಮ ಸಮಾಜ ಭಾರತ ದೇಶದಲ್ಲಿ ವಿಗ್ರಹ ಮತ್ತು ಶಿಲ್ಪಕಲೆಯಿಂದ ಗುರುತಿಸಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಲತಾ ಎಸ್ ಶೆಟ್ಟಿ, ಗಿರಿಜಾ ಮೊಗೇರ, ಬೈಂದೂರು ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಪಾಟೀಲ್, ಬೈಂದೂರು ವಿಶ್ವಕರ್ಮ ಯುವಕ ಸಂಘದ ಗೌರವಾಧ್ಯಕ್ಷ ನಾಗೇಂದ್ರ ಆಚಾರ್, ಸಂಘದ ಅಧ್ಯಕ್ಷ ನಾಗರಾಜ್ ಆಚಾರ್ ಬಂಕೇಶ್ವರ, ಕಾರ್ಯದರ್ಶಿ ಹರೆಗೋಡು ಸುಶಾಂತ್ ಆಚಾರ್, ಸಂಘದ ಸಂಘಟನಾ ಕಾರ್ಯದರ್ಶಿ ನಾಗರಾಜ ಆಚಾರ್ ಯೋಜನಾನಗರ, ಹರೆಗೋಡು ಸುಮಂತ್ ಆಚಾರ್, ವಿಘ್ನೇಶ್ ಆಚಾರ್ ಯೋಜನಾನಗರ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯವರು ಇದ್ದರು.

Leave a Reply