ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶಾಲೆಬಾಗಿಲು ಮಾತ್ರಶ್ರೀ ಸಭಾಭವನದಲ್ಲಿ 18ನೇ ಜೇಸಿ ಸಪ್ತಾಹ ‘ಸಮ್ಮಿಲನ-2022’ ಭಾನುವಾರ ಉದ್ಘಾಟನೆಗೊಂಡಿತು.
ಶಾಸಕರಾದ ಬಿ.ಎಮ್.ಸುಕುಮಾರ್ ಶೆಟ್ಟಿ ಅವರು ಸಪ್ತಾಹವನ್ನು ಉದ್ಘಾಟಿಸಿ ಶುಭಹಾರೈಸಿದರು. ಜೆಸಿಐ ಉಪ್ಪುಂದದ ಅಧ್ಯಕ್ಷರಾದ ನಾಗರಾಜ್ ಪೂಜಾರಿ ಉಬ್ಜೇರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಬೈಂದೂರು ಬಂಟರ ಸಂಘದ ಅಧ್ಯಕ್ಷರಾದ ನಾಕಟ್ಟೆ ಜಗನ್ನಾಥ ಶೆಟ್ಟಿ, ನಿವೃತ್ತ ಶಿಕ್ಷಕರಾದ ಶ್ರೀನಿವಾಸ ಪೂಜಾರಿ ಉಬ್ಜೇರಿ, ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ, ಜಿಲ್ಲಾ ರೋಟರಿ ಝೋನಲ್ ಲೆಫ್ಟಿನೆಂಟ್ ಡಾ. ಪ್ರವೀಣ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ. ಎಂ., ಬೈಂದೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿಯಾದ ಅರುಣ್ ಕುಮಾರ್ ಶಿರೂರು, ವಲಯ 15ರ ಸೀನಿಯರ್ ಮೆಂಬರ್ ಅಷೋಶಿಯೇಷನ್ ಉಪಾಧ್ಯಕ್ಷ ಯು. ಪ್ರಕಾಶ್ ಭಟ್, ಸಪ್ತಾಹ ಸಭಾಪತಿ ಜೆಸಿ ಪುರಂದರ್ ಖಾರ್ವಿ, ನಿಕಟ ಪೂರ್ವಾಧ್ಯಕ್ಷರಾದ ಜೆಸಿ ಪುರುಷೋತ್ತಮದಾಸ್, ಮಂಗೇಶ ಶ್ಯಾನುಭಾಗ್, ಸಪ್ತಾಹ ಖಜಾಂಜಿ ಪ್ತದೀಪ್ ಕುಮಾರ್ ಶೆಟ್ಟಿ, ಜೇಸಿರೇಟ್ ಅಧ್ಯಕ್ಷೆ ಸುಪರ್ಣ ಯೋಜನಾಧಿಕಾರಿಗಳಾದ ಗಣೇಶ್ ಗಾಣಿಗ, ಅವಿನಾಶ್ ಪೂಜಾರಿ, ಸಂತೋಷ್ ಆಚಾರಿ ಮೊದಲಾದವರು ಉಪಸ್ಥಿತರಿದ್ದರು.
ದೃತಿ ಸರ್ಜಿಕಲ್ ಇಂಡಸ್ಟ್ರಿ ಮ್ಯಾನೆಜಿಂಗ್ ಡೈರೆಕ್ಟರ್ ಶರತ್ ಕುಮಾರ್ ಶೆಟ್ಟಿ ಅವರಿಗೆ ಸಾಧನಾಶ್ರೀ ಉದ್ಯಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಲೆಮರೆಯ ಕಾಯಕ ಸೇವೆಗೆ ಉಪ್ಪುಂದ ಗ್ರಾಮ ಪಂಚಾಯತ್ ಸಿಬ್ಬಂದಿಯಾದ ನರಸಿಂಹ ಇವರನ್ನು ಸನ್ಮಾನಿಸಲಾಯಿತು. ಮುದ್ದುಕ್ರಷ್ಣ, ಮುದ್ದು ರಾಧೆ, ಸ್ಲೋ ಸೈಕಲ್ ರೇಸ್, ಸ್ಲೋ ಬೈಕ್, ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ಪೂರ್ವಾಧ್ಯಕ್ಷರಾದ ಮಂಗೇಶ್ ಶಾನುಭಾಗ್ ವೇದಿಕೆಗೆ ಆಹ್ವಾನಿಸಿ ಪೂರ್ವಾಧ್ಯಕ್ಷರಾದ ದೇವರಾಯ ದೇವಾಡಿಗ ಸ್ವಾಗತಿಸಿದರು ಸುಬ್ರಮಣ್ಯ ಜಿ. ಉಪ್ಪುಂದ ಸಾಧನಾಶ್ರೀ ಪರಿಚಯ ವಾಚಿಸಿದರು. ಸಂದೀಪ್ ನಾಯಕ್ ಬಹುಮಾನಿತರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಜಗದೀಶ್ ದೇವಾಡಿಗ ವಂದನಾರ್ಪಣೆಗೈದರು. ಬಳಿಕ ತಾಂಡವ ಡ್ಯಾನ್ಸ್ ಸ್ಕೂಲ್ ಕುಂದಾಪುರ ಇವರಿಂದ ಅದ್ದೂರಿ ನೃತ್ಯ ವೈವಿದ್ಯ ನೆಡೆಯಿತು.