ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,: ಇಲ್ಲಿನ ಶ್ರೀ ಸೇನೇಶ್ವರ ದೇವಸ್ಥಾನದ ಸಮೀಪದ ಹೊಳ್ಳರ ಮನೆಯ ಪರಿಸರದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿದಿದ್ದಾರೆ.
ಬೈಂದೂರು ಸೇನೇಶ್ವರ ದೇವಾಲಯದ ಸಮೀಪದ ಹೊಳ್ಳರ ಮನೆಯ ಪರಿಸರದಲ್ಲಿ ಮಂಗಳವಾರ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದರು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬೈಂದೂರು ಅರಣ್ಯ ಸಿಬ್ಬಂದಿಗಳು ಹಾವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡಲು ಕೊಂಡೊಯ್ದಿದ್ದಾರೆ. ಸ್ಥಳೀಯರು ಹಾವನ್ನು ಸೆರೆಹಿಡಿಯುವಲ್ಲಿ ಸಹಕರಿಸಿದ್ದಾರೆ.