ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ಮರವಂತೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ವಿಶೇಷ ಗ್ರಾಮಸಭಾ ಅಧಿವೇಶನ ಹಾಗೂ ಸ್ವಚ್ಛತಾ ಹಿ ಸೇವಾ ಆಂದೋಲನ ನಡೆಯಿತು.
ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯಕರ್ತರು ಪರಿಸರ ಸ್ವಚ್ಚತೆ ಮಾಡಿದರು. ಪ್ರೌಢಶಾಲೆಯಲ್ಲಿ ನಡೆದ ಗ್ರಾಮಸಭಾ ಅಧಿವೇಶನದಲ್ಲಿ ಕಾರ್ಯದರ್ಶಿ ದಿನೇಶ ಶೇರುಗಾರ್ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಸಂಕಲ್ಪ ಪ್ರತಿಜ್ಞೆ ಬೋಧಿಸಿದರು.
ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ ಖಾರ್ವಿ, ಸದಸ್ಯರಾದ ಎಂ. ವಿನಾಯಕ ರಾವ್, ಸುಜಾತಾ, ನಾಗರಾಜ ಪಟಗಾರ್, ಕರುಣಾಕರ ಆಚಾರ್, ಸುಧಾಕರ ಆಚಾರ್, ಕಿಶನ್ ಪೂಜಾರಿ, ಮಾಜಿ ಅಧ್ಯಕ್ಷರಾದ ಅನಿತಾ ಆರ್. ಕೆ, ಎಸ್. ಜನಾರ್ದನ, ಸಾಧನಾ ಕಾರ್ಯದರ್ಶಿ ದೇವಿದಾಸ ಶ್ಯಾನುಭಾಗ್, ಸದಸ್ಯರಾದ ಎಂ. ಅಣ್ಣಪ್ಪ ಬಿಲ್ಲವ, ಎಂ. ಶಂಕರ ಖಾರ್ವಿ, ನಾಗೇಶ ರಾವ್, ಸೋಮಯ್ಯ ಬಿಲ್ಲವ, ಮಂಜು ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯರಾದ ಸರ್ವೋತ್ತಮ ಭಟ್, ಸೀತಾರಾಮ, ತ್ಯಾಜ್ಯ ಸಂಪನ್ಮೂಲ ಘಟಕದ ಮೇಲ್ವಿಚಾರಕಿ ಸುನೀತಾ, ಶಿಕ್ಷಕರು, ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.