ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಅಪಪ್ರಚಾರ – ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸ್ಪಷ್ಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಉಪ್ಪುಂದದಲ್ಲಿ ಪ್ರಧಾನ ಕಛೇರಿ ಹೊಂದಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 18,000ಕ್ಕೂ ಮಿಕ್ಕಿ ಸದಸ್ಯರು, 1,000 ಕೋಟಿ ರೂ. ವ್ಯವಹಾರ ಹೊಂದಿರುವ ಪಾರದರ್ಶಕ ಸಹಕಾರಿ ಸಂಸ್ಥೆಯಾಗಿದೆ. ಸಂಸ್ಥೆಯಿಂದ ಸಾಲಪಡೆದ ವ್ಯಕ್ತಿಯೂರ್ವರು ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಗ್ಗೆಯೇ ಗೊಂದಲ ಸೃಷ್ಟಿಸುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.

Call us

Click Here

ಅವರು ಸಂಸ್ಥೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹರಡುತ್ತಿರುವ ಸುಳ್ಳು ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಿ, 6 ವರ್ಷಗಳ ಹಿಂದೆ ನಾಗರಾಜ ಪೂಜಾರಿ ಎಂಬ ವ್ಯಕ್ತಿ ತನ್ನ ಕುಟುಂಬದ ಆಸ್ತಿಯನ್ನು ಅಡಮಾನವಿರಿಸಿ 25 ಲಕ್ಷ ರೂ. ಸಾಲ ಪಡೆದು ಸ್ಪಲ್ಪ ಹಣವನ್ನಷ್ಟೇ ಮರುಪಾವತಿಯನ್ನೂ ಮಾಡಿದ್ದಾರೆ. ಸಾಲ ಮರುಪಾವತಿಗೆ ಸಾಕಷ್ಟು ಸಮಯಾವಕಾಶ ನೀಡಲಾಗಿತ್ತು. ಆದಾಗ್ಯೂ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಸಂಸ್ಥೆಯ ವಿರುದ್ಧವೇ ಇಲಾಖೆಗಳಿಗೆ ದೂರು ನೀಡಿದ್ದರು. ಸಹಕಾರಿ ಇಲಾಖೆಯ ಎಲ್ಲಾ ಹಂತದ ತನಿಕೆಯಲ್ಲಿಯೂ ತನಿಕೆ ನಡೆದು, ಸಂಸ್ಥೆಯ ದಾಖಲೆಪತ್ರಗಳು ಕ್ರಮಬದ್ಧವಾಗಿರುವ ಬಗ್ಗೆ ವರದಿ ಬಂದಿದೆ. ನ್ಯಾಯಾಂಗದಿಂದಲೂ ಸ್ಪಷ್ಟ ಆದೇಶ ಬಂದಿದೆ. ಈಗ ಅದರ ಆದೇಶದ ವಿರುದ್ಧವೇ ಹೋಗಿದ್ದು, ಸುಳ್ಳು ಆರೋಪ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದ್ದು, ಸಂಘವು ಆಡಳಿತ ಮಂಡಳಿಯಲ್ಲಿ ಮತ್ತೊಮ್ಮೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸಂಘದ ಸದಸ್ಯರು ಅಪಪ್ರಚಾರಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಸಂಸ್ಥೆ ಬಲಿಷ್ಠವಾಗಿ, ಸಹಕಾರಿ ನಿಯಮಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ವೇಳೆ ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡು, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ, ಹಾಗೂ ಹಿರಿಯ ಪ್ರಬಂಧಕ ಚಂದ್ರಯ್ಯ ಶೆಟ್ಟಿ ಉಪಸ್ಥಿತರಿದ್ದರು.

Leave a Reply