ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಹೊಂದಿಕೊಂಡಿದ್ದ ಅನುಪಯುಕ್ತ ನೀರಿನ ಟ್ಯಾಂಕ್‌ನ್ನು ಗ್ರಾಪಂ ಕೆಡವಿಹಾಕಿದೆ.
ರಾಷ್ಟ್ರೀಯ ಹೆದ್ದಾರಿಗೆ ತಾಕಿಕೊಂಡಿದ್ದ 30 ವರ್ಷಗಳಷ್ಟು ಹಳೆಯದಾದ 10 ವರ್ಷಗಳಿಂದ ಅನುಪಯುಕ್ತವಾಗಿದ್ದ ನೀರಿನ ಟ್ಯಾಂಕನ್ನು ಜೆಸಿಬಿ ಬಳಸಿ ಕೆಡವಲಾಯಿತು. ಈ ಸಂದರ್ಭ ಸರ್ವಿಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪ್ಲೈಓವರ್ ಒಂದು ಬದಿಯಲ್ಲಿ ಬಂದ್ ಮಾಡಿ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮುಂಜಾಗೃತೆ ಕೈಗೊಳ್ಳಲಾಗಿತ್ತು.