ಕಾನೂನು ಅರಿವು ನೆರವು, ವಿವಿಧ ಸರ್ಕಾರಿ ಇಲಾಖೆಗಳ ಸೌಲಭ್ಯ ಮಾಹಿತಿ ಕಾರ್ಯಾಗಾರ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕಾನೂನು ಎಂದರೆ ಮುನುಷ್ಯನನ್ನು ಬಿಡದಂತೆ ಹಿಂಬಾಲಿಸುವ ನೆರಳಿದ್ದಂತೆ. ಹುಟ್ಟಿನಿಂದ ಸಾವಿನ ವರೆಗೂ ಪ್ರತಿಯೊಬ್ಬ ಮಾನವನೂ ಕಾನೂನಿನ ಪರಿಧಿಯಲ್ಲಿಯೇ ಇರುತ್ತಾನೆ. ಭ್ರೂಣದಲ್ಲಿರುವ ಕೂಸಿನಿಂದ ಹಿಡಿದು ಜೀವಿತಾವಧಿವರೆಗೂ ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಇರಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಗೌರವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಹೇಳಿದರು.

Call us

Click Here

ಬೈಂದೂರು ಯಡ್ತರೆ ಜೆಎನ್‌ಆರ್ ಸಭಾಭವನದಲ್ಲಿ ಭಾನುವಾರ 75ನೇ ಸ್ವಾಂತಂತ್ರ್ಯ ಅಮೃತ ಮಹೋತ್ಸವ ನೆನಪಿಗಾಗಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರೀಕರ ಸಬಲೀಕರಣ ಅಂಗವಾಗಿ ಹಮ್ಮಿಕೊಂಡಿರುವ ಕಾನೂನು ಅರಿವು ನೆರವು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸೌಲಭ್ಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಕಾನೂನು ಸೇವ ಪ್ರಾಧಿಕಾರದ ಆದೇಶದಂತೆ ಪ್ರತಿ ಮನೆಮನೆಗಳಿಗೂ ಉಚಿತ ಕಾನೂನು ಸೇವೆ ನೀಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕಾನೂನಿನ ಅರಿವು ಪ್ರಚಾರ ಅಭಿಯಾನವನ್ನು ಆರಂಭಿಸಲಾಗಿದೆ. ಪ್ರತಿಯೊಬ್ಬರಿಗೂ ಕನಿಷ್ಠ ಕಾನೂನಿನ ಜ್ಞಾನ ಇರಬೇಕು. ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸಿದರೆ ಮಾತ್ರ ನ್ಯಾಯಾಲಯಕ್ಕೆ ಬರುವ ಅಗತ್ಯವಿರುವುದಿಲ್ಲ. ಇಂದಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಅತೀಯಾದ ಶೋಷಣೆಯಾಗುತ್ತಿದೆ. ಇಂತಹ ನೊಂದ ಶೋಷಿತರ, ಬಡವರ, ಹಿಂದುಳಿದವರಿಗೆ ನ್ಯಾಯ ಕೊಡಿಸುವುದೇ ಅಭಿಯಾನದ ಮುಖ್ಯ ಉದ್ದೇಶ ಎಂದರು.

ಕುಂದಾಪುರ ಉಪ ವಿಭಾಗಾಧಿಕಾರಿ ಕೆ ರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲ ಟಿ. ಬಿ. ಶೆಟ್ಟಿ ಕಾನೂನು ಅರಿವು ನೆರವು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸೌಲಭ್ಯ ಮಾಹಿತಿಗಳ ಬಗ್ಗೆ ಉಪನ್ಯಾಸ ನೀಡಿದರು. ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ, ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು. ಇಲ್ಲಿನ ಸಪಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ. ನಾಯ್ಕ್ ಇವರಿಗೆ ಜನಸಾಮಾನ್ಯರಿಗೆ ಕಾನೂನು ಮಾಹಿತಿ ಕೃತಿಯನ್ನು ಹಸ್ತಾಂತರಿಸಲಾಯಿತು.

ಕುಂದಾಪುರ ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮ್ ಶೇಖ್, ಜೆಎಂಎಫ್‌ಸಿ ಬೈಂದೂರು-ಕುಂದಾಪುರ ಸಂಚಾರಿ ನ್ಯಾಯಾಧೀಶ ಧನೇಶ್ ಮುಗಳಿ, ವಕೀಲರಾದ ಶ್ರೀಕಾಂತ್ ಅಡಿಗ ಕೊಲ್ಲೂರು, ಮೋಬಿ ಪಿ. ಸಿ., ಸಮಾಜ ಕಲ್ಯಾಣ ಇಲಾಖೆಯ ರಾಜೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ, ವಲಯ ಅರಣ್ಯಾಧಿಕಾರಿ ಸಿದ್ದೇಶ್ವರ ಕುಂಬಾರ, ಠಾಣಾಧಿಕಾರಿ ನಿರಂಜನ ಗೌಡ ಉಪಸ್ಥಿತರಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್. ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಶರ್ಮಿಳಾ ಎಸ್. ಪ್ರಾಸ್ತಾವಿಸಿದರು. ಸರ್ಕಾರಿ ಸಹಾಯಕ ಅಭಿಯೋಜಕಿ ಇಂದಿರಾ ನಾಯ್ಕ ವಂದಿಸಿದರು. ನ್ಯಾಯಾಲಯ ಸಿಬ್ಬಂದಿ ಶ್ವೇತಾ ನಿರೂಪಿಸಿದರು.

Leave a Reply