ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದ 50 ವಿದ್ಯಾರ್ಥಿಗಳಿಗೆ, ಉದ್ಯಮಿ, ಬೆಂಗಳೂರು ಶ್ರೀ ಮೂಕಾಂಬಿಕಾ ಕೇಟರರ್ಸ್ ಮಾಲಕ ರಾಘವ ಗೌಡ ಅವರು ಕೊಡುಗೆಯಾಗಿ ನೀಡಿದ ವಸ್ತ್ರಗಳನ್ನು ವಿತರಿಸಿದರು.
ಉದ್ಯಮಿ ಸದಾನಂದ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಸ್ತ್ರಗಳನ್ನು ವಿತರಿಸಿದರು. ಈ ವೇಳೆ ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ, ನೇತ್ರಾವತಿ ಗೌಡ ಉಪಸ್ಥಿತರಿದ್ದರು.