ಪುರಭವನ ನಿರ್ಮಾಣದಿಂದ ಗಾಂಧಿ ಮೈದಾನಕ್ಕೇನೂ ಸಮಸ್ಯೆಯಿಲ್ಲ. ತಪ್ಪು ಮಾಹಿತಿ ಹರಡಬೇಡಿ – ಜಿಪಂ ಮಾಜಿ ಸದಸ್ಯ ಟಿ. ಬಾಬು ಶೆಟ್ಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಡಿ.16:
ಇಲ್ಲಿನ ಗಾಂಧಿ ಮೈದಾನವು ಮಿಲಿಟರಿ ಗ್ರೌಂಡ್ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಪುರಭವನ ನಿರ್ಮಾಣದಿಂದ ಪ್ರಸ್ತುತ ಮೈದಾನದಲ್ಲಿ ನಡೆಯುತ್ತಿರುವ ಯಾವ ಚಟುವಟಿಕೆಗೂ ತೊಂದರೆಯಾಗುವುದೂ ಇಲ್ಲ. ಬಳಕೆಯಾಗದ ಮೈದಾನದ ಒಂದು ಭಾಗದಲ್ಲಷ್ಟೇ ಸಾರ್ವಜನಿಕರಿಗೆ ಉಪಯೋಗವಾಗಲಿರುವ ಪುರಭವನ ನಿರ್ಮಾಣವಾಗಲಿದೆ. ಸ್ಥಳಕ್ಕೆ ಬಂದು ವಾಸ್ತವಾಂಶ ಅರಿಯದೇ ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಜಿಪಂ ಮಾಜಿ ಸದಸ್ಯ ಟಿ. ಬಾಬು ಶೆಟ್ಟಿ ಹೇಳಿದರು.

Call us

Click Here

Watch Video

ಅವರು ಬೈಂದೂರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಬೈಂದೂರು ತಾಲೂಕಿಗೆ ಸಂಸದರು, ಶಾಸಕರ ಪ್ರಯತ್ನದಿಂದ ಹೆಚ್ಚಿನ ಅನುದಾನ ದೊರೆತಿದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ ಎಂದರು.

3.45 ಎಕ್ರೆ ಜಾಗ ಕ್ರೀಡಾ ಇಲಾಖೆ & 1.50 ಎಕ್ರೆ ನಗರಾಭಿವೃದ್ಧಿ ಇಲಾಖೆಗೆ ಈಗಾಗಲೇ ಹಸ್ತಾಂತರವಾಗಿದೆ. 4.95ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ಪುರಭವನ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಆರಂಭವಾಗಲಿದೆ. ಕ್ರೀಡಾ ಇಲಾಖೆಯ ಮೂಲಕ ಮೈದಾನ ಅಭಿವೃದ್ಧಿಗಾಗಿ ಪ್ರತ್ಯೇಕ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಅನುದಾನ ಮಂಜೂರಾಗುವುದು ಬಾಕಿಇದೆ ಎಂದರು.

ಮಾಜಿ ತಾಪಂ ಸದಸ್ಯ ಸದಾಶಿವ ಡಿ ಪಡುವರಿ ಮಾತನಾಡಿ ಸಾರ್ವಜನಿಕರ ಉಪಯೋಗಕ್ಕೆ ಬಾರದ ಜಾಗದಲ್ಲಿ ಪುರಭವನ ನಿರ್ಮಿಸಿ ಪ್ರಯೋಜನವೂ ಇಲ್ಲ. ನಾವೆಲ್ಲರೂ ಗಾಂಧಿ ಮೈದಾನದಲ್ಲಿ ಆಡಿ ಬೆಳೆದವರು. ಮೈದಾನದ ಯಾವ ಭಾಗ ಉಪಯೋಗವಾಗುತ್ತಿದೆ ಎಂಬ ಅರಿವೂ ಎಲ್ಲರಿಗೂ ಇದೆ. ಯಾರೋ ನಾಲ್ಕು ಮಂದಿ ಮಾಡುತ್ತಿರುವ ವಿರೋಧವನ್ನು ಸಾರ್ವಜನಿಕರ ಅಭಿಪ್ರಾಯದಂತೆ ಬಿಂಬಿಸುವುದು ಸರಿಯಲ್ಲ ಎಂದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಧರ್ಮದರ್ಶಿ ಜಯಾನಂದ ಹೋಬಳಿದಾರ್ ಮಾತನಾಡಿ, ಬೈಂದೂರು ಪುರಭವನ ನಿರ್ಮಾಣದಿಂದ ಯಾರೋಬ್ಬರಿಗೂ ಸಮಸ್ಯೆಯಾಗದು. ಹಿಂದೆ ನಮಗೂ ಮೈದಾನ ಕಿರಿದಾಗಲಿದೆ ಎಂಬ ಸಂಶಯವಿತ್ತು. ಆದರೆ ಗಡಿಗುರುತು ಹಾಕಿದ ಬಳಿಕ ಗೊಂದಲ ನಿವಾರಣೆಯಾಗಿದ್ದು, ನಗರದ ಹೃದಯಭಾಗದಲ್ಲಿ ಪುರಭವನ ನಿರ್ಮಾಣವಾಗುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

Click here

Click here

Click here

Click Here

Call us

Call us

ಜಿಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ ಮಾತನಾಡಿ ಪುರಭವನವನ್ನು ಯಾವುದೋ ಮೂಲೆಯಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಜನರಿಗೆ ಉಪಯೋಗವಾಗದ ಕಟ್ಟಡ ಪಾಳು ಬಂಗಲೆಯಂತಾಗುವುದು. ನಗರ ಪ್ರದೇಶದಲ್ಲಿಯೇ ಇದ್ದರೆ ಎಲ್ಲಾ ಕಾರ್ಯಕ್ರಮಗಳಿಗೂ ಅದು ಉಪಯೋಗವಾಗಲಿದೆ ಎಂದರು.

ಈ ವೇಳೆ ತಾಪಂ ಮಾಜಿ ಸದಸ್ಯರಾದ ಪುಪ್ಪರಾಜ್ ಶೆಟ್ಟಿ, ಪ್ರಸನ್ನ ಕುಮಾರ್ ಉಪ್ಪುಂದ, ಗೋವಿಂದ ಮಟ್ನಕಟ್ಟೆ, ಗಣೇಶ್ ಕಾರಂತ್, ನಾಗರಾಜ ಯಡ್ತರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply