ಕುಂದಾಪುರ ಬೋರ್ಡ್ ಹೈಸ್ಕೂಲ್: ಬಿಎಡ್ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇತ್ತೀಚಿನ ಹದಿಹರೆಯದವರಲ್ಲಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಪಾಶ್ರ್ವವಾಯುನಂತಹ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ನಮಗೆ ಬರುವ ವಿವಿಧ ಕಾಯಿಲೆಗಳು ಜೀವನ ಶೈಲಿಯೇ ಕಾರಣವಾಗಿದೆ. ಇದರಿಂದ ನಮ್ಮ ಜೀವನ ಹಾಗೂ ಜೀವಿತಾವಧಿ ಕುಂಠಿತವಾಗುತ್ತದೆ ಎಂದು ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಉದಯ ಮಡಿವಾಳ ಎಂ ಹೇಳಿದರು.

Call us

Click Here

ಅವರು ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ಕೋಡಿ ಬ್ಯಾರಿಸ್ ಶಿಕ್ಷಣ ಸಂಸ್ಥೆಯ ಬಿ,ಎಡ್ ಪ್ರಶಿಕ್ಷಣಾರ್ಥಿಗಳ ಸೇವಾ ಪೂರ್ವ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಉತ್ತಮ ಜೀವನಶೈಲಿ ರೂಪಿಸಿಕೊಳ್ಳಲು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತಿಮುಖ್ಯವಾಗಿದೆ ಎಂದರು.

ಕಾರ್ಯಕ್ರಮವನ್ನು ಸಂಸ್ಥೆಯ ಉಪಪ್ರಯಾಂಶಪಾಲರಾದ ಕಿರಣ್ ಹೆಗ್ಡೆ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಿವಿಧ ಮನೋಲ್ಲಾಸ ಕ್ರೀಡೆಗಳು ಹಾಗೆ ವಿವಿಧ ಪಠ್ಯ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಬಹುಮಾನ ವಿಜೇತರ ಪಟ್ಟಿಯನ್ನು ಮೇಘ ವಾಚಿಸಿದರು. ಸಂಸ್ಥೆಯಲ್ಲಿ ತಾವು ಕಳೆದ 50 ದಿನಗಳ ಅನುಭವವನ್ನು ಪ್ರಶಿಕ್ಷಣಾರ್ಥಿ ವಿನಿತ ಸಭೆಯಲ್ಲಿ ಹಂಚಿಕೊಂಡರು. ಬಿಎಡ್ ಪ್ರಶಿಕ್ಷಣಾರ್ಥಿ ಪೂಜಾ ಕಾರ್ಯಕ್ರಮವನ್ನು ನಿರೂಪಿಸಿ, ಶುಬ್ರತಾ ಸ್ವಾಗತಿಸಿ ವಂದನ ವಂದಿಸಿದರು.

Leave a Reply