ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ರಾಣಿ ಬಲೆ ಮೀನುಗಾರರ ಒಕ್ಕೂಟದ ವತಿಯಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಧನುರ್ ಸಂಕ್ರಾಂತಿಯಿಂದ ವೃಷಭ ಸಂಕ್ರಾಂತಿ ವರೆಗಿನ ಉತ್ಸವದ ಅಂಗವಾಗಿ ಶುಕ್ರವಾರದಂದು ಶ್ರೀ ದೇವಿಗೆ ಬೆಳಿಗ್ಗೆ ಏಕದಶ ರುದ್ರಾಭಿಷೇಕ, ರಾತ್ರಿ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿಯೊಂದಿಗೆ ಬೆಳ್ಳಿ ರಥೋತ್ಸವ ಜರುಗಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಪ್ರಕಾಶ್ ಉಡುಪ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಗಳು ಜರುಗಿದವು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಸಂಘದ ಪದಾಧಿಕಾರಿಗಳು ಹಾಗೂ ರಾಣಿ ಬಲೆ ಮೀನುಗಾರ ಸದಸ್ಯರು ಉಪಸ್ಥಿತರಿದ್ದರು.