ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಿರಿಮಂಜೇಶ್ವರ ಗ್ರಾಮದ ಕೊಡೇರಿಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭವು ಡಿ.೧೭ರ ಶನಿವಾರದಂದು ಕೊಡೇರಿ ಶಾಲಾ ಆವರಣದಲ್ಲಿ ಬಹು ವಿಜೃಂಭಣೆಯಿಂದ ಜರಗಿತು.
ಪೂರ್ವಾಹ್ನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಧ್ವಜಾರೋಹಣಗೈದು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಉದ್ಘಾಟಿಸಿ ವಾರ್ಷಿಕೋತ್ಸವಕ್ಕೆ ಶುಭ ಕೋರಿದರು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸುರೇಶ ಎಚ್. ಖಾರ್ವಿ ಅಧ್ಯಕ್ಷತೆ ವಹಿಸಿದ್ದರೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೇಖರ ಖಾರ್ವಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಆನಂದ ಪೂಜಾರಿ ಕೊಡೇರಿ, ಕೃಷ್ಣ ಖಾರ್ವಿ, ರಮೇಶ ಖಾರ್ವಿ, ನೇತ್ರಾವತಿ, ಶಶಿಕಲಾ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಕಾರಂತ, ಉದ್ಯಮಿ ಕೆ. ವಿ. ಕಾರಂತ, ವಿಶ್ವನಾಥ ಪೂಜಾರಿ, ಹರಿದಾಸ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರಣ್ ಶಂಕರ್ ಇವರು ಎಲ್ಲಾ ವಿದ್ಯಾರ್ಥಿಗಳಿಗೂ ವಾಟರ್ ಕ್ಯಾನ್ ಉಡುಗೊರೆಯಾಗಿ ನೀಡಿದರು, ಮುಖ್ಯ ಶಿಕ್ಷಕಿ ಶ್ಯಾಮಲಾ ರಾವ್ ಸರ್ವರನ್ನು ಸ್ವಾಗತಿಸಿದರೆ ಶಿಕ್ಷಕಿಯರಾದ ಸ್ವಾತಿ ಮತ್ತು ಮರ್ಲಿ ನಿರ್ವಹಿಸಿದರು, ಶಿಕ್ಷಕಿ ಚಂದ್ರಕಲಾ ವಂದಿಸಿದರು.
ಸಂಜೆ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಹಕ್ರೆಮಠ, ಕೊಡೇರಿ ಮತ್ತು ಹೊಸಿತ್ಲು ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಸಾದರಪಡಿಸುವುದರ ಮೂಲಕ ನೆರೆದ ವಿದ್ಯಾಭಿಮಾನಿಗಳ ಮನರಂಜಿಸಿದರು
ಆ ಬಳಿಕ ಸ್ಥಳೀಯ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಸಭಾಧ್ಯಕ್ಷತೆಯಲ್ಲಿ ನೆಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಗೆ ಕೊಡುಗೆ ನೀಡಿದ ಕೊಡುಗೈದಾನಿಗಳಾದ ಕೆ.ವಿ. ಕಾರಂತ, ವಾಸುದೇವ ಕಾರಂತ, ಆಳೊಳ್ಳಿ ಗಣೇಶ ಪೂಜಾರಿ ಬೆಂಗಳೂರು, ಕುಂದಾಪುರ ಮನೆ ಸತೀಶ್ ಪೂಜಾರಿ ಬೆಂಗಳೂರು, ನರಸಿಂಹ ಪೂಜಾರಿ ಚೊಣಕಿನಮನೆ ನಾಗೂರು ಇವರುಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಬಹುಮಾನ ಪಡೆದ, ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮತ್ತು ೧೦ ನೇ ತರಗತಿ ಪರೀಕ್ಷೆಯಲ್ಲಿ ೯೦% ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು, ವಿದ್ಯಾರ್ಥಿಗಳಿಗೆ ಪ್ರತಿಭಾ ಪಾರಿತೋಷಕ, ಪೋಷಕರಿಗೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘಕ್ಕೆ ಸಾಕಷ್ಟು ಧನ ಸಹಾಯ ನೀಡಿದ ೧೯೯೦-೯೧ ರ ಸಾಲಿನ ಹಳೆ ವಿದ್ಯಾರ್ಥಿ ಗುಂಪನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಯಶಪಾಲ್ ಸುವರ್ಣ ( ಅಧ್ಯಕ್ಷರು, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಉಡುಪಿ) ಕೆ. ಗೋಪಾಲ ಪೂಜಾರಿ ( ಮಾಜಿ ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ), ಕೆ. ವಿ. ಕಾರಂತ (ಉದ್ಯಮಿಗಳು, ಫ್ಯೂಚರ್ ಫರ್ಟಿಲೈಸರ್‍ಸ್ ಹಾಸನ), ಮಂಜುನಾಥ ಎಂ.ಜಿ. (ಕೇತ್ರ ಶಿಕ್ಷಣಾಧಿಕಾರಿಗಳು ಬೈಂದೂರು ವಲಯ), ಗೋವಿಂದ ಬಾಬು ಪೂಜಾರಿ (ಅಧ್ಯಕ್ಷರು, ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ), ಗಣೇಶ ಪೂಜಾರಿ ಆಳೊಳ್ಳಿ (ಉದ್ಯಮಿಗಳು ಬೆಂಗಳೂರು) ಮಂಜಣ್ಣ ೮೮೮ ( ಮತ್ಸ್ಯೋದ್ಯಮಿಗಳು), ಸತೀಶ ಪೂಜಾರಿ (ಉದ್ಯಮಿಗಳು ಬೆಂಗಳೂರು) ನರಸಿಂಹ ಪೂಜಾರಿ ಚೊಣಕಿನಮನೆ (ಉದ್ಯಮಿ) ಶೇಖರ ಪೂಜಾರಿ ( ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ), ಲಕ್ಷ್ಮಣ ಖಾರ್ವಿ (ಅಧ್ಯಕ್ಷರು ಶ್ರೀ ರಾಮ ಸೇವಾ ಸಮಿತಿ ಹಕ್ರೆಮಠ ಕೊಡೇರಿ), ಬೈಂದೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಕರುಣಾಕರ ಶೆಟ್ಟಿ, ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಕಾರಂತ, ಪಂಚಾಯತ್ ಅಧ್ಯಕ್ಷರಾದ ಗೀತಾ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಆನಂದ ಪೂಜಾರಿ ಕೊಡೇರಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸುರೇಶ ಎಚ್. ಖಾರ್ವಿ, ಮುಖ್ಯೋಪಧ್ಯಾಯರಾದ ಶ್ಯಾಮಲಾ ರಾವ್, ವಿದ್ಯಾರ್ಥಿ ನಾಯಕ ಕು| ಅನುಷ್ ಉಪಸ್ಥಿತರಿದ್ದರು.
ಮುಖ್ಯೋಪಧ್ಯಾಯರಾದ ಶ್ಯಾಮಲಾ ರಾವ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ದೈಹಿಕ ಶಿಕ್ಷಕರಾದ ಚಿತ್ತರಂಜನ್ ಹೆಗ್ಗಡೆ ಬಹುಮಾನ ವಿಜೇತರ ಯಾದಿಯನ್ನು ವಾಚಿಸಿದರು ಶಿಕ್ಷಣ ಸಂಯೋಜಕ ಹಾಗೂ ಹಳೆ ವಿದ್ಯಾರ್ಥಿ ಸತ್ಯನಾ ಕೊಡೇರಿ ನಿರೂಪಣೆಗೈದರೆ ಶಿಕ್ಷಕಿ ಲತಾ ವಂದಿಸಿದರು.
ಬಳಿಕ ಶಾಲಾ ವಿದ್ಯಾರ್ಥಿಗಳು ವೀರ ವೃಷಸೇನ ಎಂಬ ಆಖ್ಯಾನದ ಯಕ್ಷಗಾನವನ್ನು ಪ್ರಸ್ತುತ ಪಡಿಸಿದರು.