ಪ್ರಾಚೀನ ಭಾರತದ ಸಮೃದ್ಧ ಆರ್ಥಿಕತೆಗೆ ಯುವಕರ ಕೊಡುಗೆ ದೊಡ್ಡದಿದೆ: ಪ್ರಸನ್ನ ಕುಮಾರ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಭಾರತದ ಮೇಲಿನ ದಾಳಿಗಳಿಗೆ ಕಾರಣವೇ ಭಾರತದ ಆರ್ಥಿಕ ಸಮೃದ್ಧಿ. ಮೊದಲ ಶತಮಾನದಿಂದ 15 ನೇ ಶತಮಾನದವರೆಗೆ ಪ್ರಪಂಚದ ಉತ್ಪಾದನೆಯ ಶೇಕಡಾ 32 ಭಾರತವೊಂದರಿಂದಲೇ ಆಗಿತ್ತು ಎಂದು ಸ್ವಾವಲಂಬಿ ಭಾರತ ಅಭಿಯಾನದ ಉಡುಪಿ ಜಿಲ್ಲಾ ಸಹ ಸಂಯೋಜಕ ಪ್ರಸನ್ನ ಕುಮಾರ್ ಹೇಳಿದರು.

Call us

Click Here

ಅವರು ಕಂಬದಕೋಣೆ ಪದವಿ ಪೂರ್ವ ಕಾಲೇಜು ಇಲ್ಲಿ ನಡೆದ ಸ್ವಾವಲಂಬಿ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಾಚೀನ ಭಾರತ ಸಮೃದ್ಧ ಆರ್ಥಿಕತೆಯಾಗಿರಲು ಕಾರಣ ಸಮಾಜದ ಪ್ರತಿಯೊಬ್ಬ ಯುವಕರು ಸ್ವಯಂ ಪ್ರೇರಿತರಾಗಿ ಉತ್ಪಾದನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಯೊಂದು ವ್ಯಾಪಾರ, ಉದ್ಯಮ ಅಥವಾ ಕೃಷಿಯಲ್ಲಿ ಜನರು ಸ್ವಾಭಾವಿಕವಾಗಿ ಸೇರಿಕೊಳ್ಳುತ್ತಿದ್ದರು ಎಂದರು.

ಕಾಲೇಜು ಪ್ರಾಂಶುಪಾಲರಾದ ಗಣಪತಿ ಅವಭೃತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ಜಿಲ್ಲಾ ಸ್ವಾವಲಂಭಿ ಭಾರತ ಅಭಿಯಾನದ ಸಂಯೋಜಕರಾದ ವಿಜಯ ಕೊಡವೂರು ಉಪಸ್ಥಿತರಿದ್ದರು.

ರಾಘವೇಂದ್ರ ಬಿ.ಕೆ. ಸ್ವಾಗತಿಸಿದರು. ತುಳಸಿದಾಸ್ ನಿರೂಪಿಸಿದರು. ಆ ನಂತರ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಪವರ್ ಪಾಯಿಂಟ್ ಪ್ರಸೆಂಟೇಶನ್ ತೋರಿಸಲಾಯಿತು.

Leave a Reply