ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹದಿನಾರನೆಯ ಶತಮಾನದ ವಿದೇಶಿ ಆಕ್ರಮಣಕಾರರು, ವಿಶೇಷವಾಗಿ ಬ್ರಿಟಿಷರು ಭಾರತದಲ್ಲಿ ನಿರಂತರವಾಗಿ ಕೇವಲ ಸಂಪತ್ತನ್ನು ಮಾತ್ರ ಲೂಟಿ ಮಾಡಲಿಲ್ಲ, ತಮ್ಮ ದುಷ್ಟ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಮ್ಮ ಆರ್ಥಿಕತೆಗೆ ಕೊಡಲಿ ಪೆಟ್ಟು ಕೊಟ್ಟು, ಸಮಾಜ ರಚನೆಯನ್ನು ಮತ್ತು ವಿವಿಧ ಉತ್ಪಾದನಾ ಕ್ಷೇತ್ರವನ್ನು ಹಾಳು ಮಾಡಿದರು. ಆದರೆ ಯುವಶಕ್ತಿಯ ಪ್ರಮಾಣ ಮತ್ತು ಅವರಲ್ಲಿನ ಅಂತರ್ಗತ ಪ್ರತಿಭೆಯಿಂದಾಗಿ ಕಳೆದ 30 ವರ್ಷಗಳಲ್ಲಿ ಭಾರತ ಬಲಿಷ್ಟವಾಗಿದೆ ಎಂದು ಉಡುಪಿ ಜಿಲ್ಲಾ ಸ್ವಾವಲಂಬಿ ಭಾರತ್ ಅಭಿಯಾನದ ಸಹ ಸಂಯೋಜಕ್ ಪ್ರಸನ್ನ ಉಪ್ಪುಂದ ಹೇಳಿದರು.
ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾವಲಂಭಿ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲ ಡಾ.ರಘು ನಾಯ್ಕ್ ಸ್ವಾಗತಿಸಿದರು. ರಾಘವೇಂದ್ರ ಬಿ. ಕೆ ವಂದಿಸಿದರು. ತುಳಸಿದಾಸ್ ಶಿರೂರು ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಪವರ್ ಪಾಯಿಂಟ್ ಪ್ರೆಸೆಂಟೇಶನ್ ತೋರಿಸಿಲಾಯಿತು.