ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜ.17: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕರಾವಳಿ ಶಿರೂರು ಇದರ ರಜತ ಸಂಭ್ರಮದ ಪ್ರಯುಕ್ತ ಅರುಣ್ ಪಬ್ಲಿಸಿಟಿ ಹಾಗೂ ಯುವ ಶಕ್ತಿ ಉತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಕರಾವಳಿ ಸಂಭ್ರಮ – 2023 ಮುನ್ನುಡಿ ಕಾರ್ಯಕ್ರಮ ಜನವರಿ 29ರಂದು ನಡೆಯಲಿದೆ.
ಜನವರಿ28 ರಂದು ಬೆಳಿಗ್ಗೆ ಕ್ರೀಡೋತ್ಸವ, ಸ್ಥಳೀಯರಿಗೆ ಆಟೋಟ ಸ್ಪರ್ಧೆ ಹಾಗೂ ಗಾಳಿಪಟ ಸ್ಪರ್ಧೆ ನಡೆಯಲಿದೆ. ಜನವರಿ 29 ರಂದು ಆರೋಗ್ಯ ಶಿಬಿರ, ಬೃಹತ್ ಸಾಂಸ್ಕ್ರತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಕುರಿತು ಯವಶಕ್ತಿ ಉತ್ಸವ ಸಮಿತಿ ಹಾಗೂ ಊರ ಹಿರಿಯರ ಸಮ್ಮುಖದಲ್ಲಿ ಕರಾವಳಿ ಸಂಭ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್ ಈಗಾಗಲೇ ಹಲವು ಕಾರ್ಯಕ್ರಮಗಳ ಮೂಲಕ ಕರಾವಳಿ ನಿರಂತರ ಸಾಂಸ್ಕ್ರತಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದೆ.ಯುವಶಕ್ತಿ ಗಣೇಶೋತ್ಸವ ಸಮಿತಿ 25ನೇ ವರ್ಷದ ಸಂಭ್ರಮದಲ್ಲಿದೆ. ಸಭಾಭವನ ಸಿದ್ದಗೊಂಡಿದ್ದು ಅಡುಗೆಕೋಣೆ ನಿರ್ಮಾಣದ ಯೋಜನೆ ಹೊಂದಿದೆ.ರಜತ ಮಹೋತ್ಸವದ ಸಿದ್ದತೆ ಕಾರ್ಯ ಮುನ್ನುಡಿ -2023 ಕಾರ್ಯಕ್ರಮ ಆಯೋಜನೆಯಲ್ಲಿ ಊರಿನ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಸರ್ವರ ಸಹಕಾರ ಬಯಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಯುವಶಕ್ತಿ ಗೌರವಾಧ್ಯಕ್ಷ ಅಣ್ಣಪ್ಪ ಮೊಗೇರ್,ವಾಸು ಬಿಲ್ಲವ ತೆಂಕಮನೆ, ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ, ನಮ್ಮ ಕುಂದಾಪ್ರ ಬಳಗದ ಸಾಧನ್‌ದಾಸ್ ಶಿರೂರು, ಹಿರಿಯರಾದ ನಾಣು ಪೂಜಾರಿ ಆರ‍್ಮಾರಹಿತ್ಲು, ವೆಂಕಟ ಪೂಜಾರಿ ಕಾಳನಮನೆ, ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ಉತ್ಸವ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಮೇಸ್ತ, ಉಪ ಕಾರ್ಯದರ್ಶಿ ಮಾಧವ ಬಿಲ್ಲವ, ಉತ್ಸವ ಸಮಿತಿ ಸದಸ್ಯರಾದ ಮಹಾದೇವ ಬಿಲ್ಲವ, ತಿಮ್ಮಪ್ಪ ಬಿಲ್ಲವ ದೇವರಹಿತ್ಲು, ರಾಮ ಟೈಲರ್, ಸಿ.ಎನ್.ಬಿಲ್ಲವ, ಗುರುರಾಜ್ ಎಸ್, ಗಿರೀಶ್ ಕರಾವಳಿ, ಭಾಸ್ಕರ ಮೊಗೇರ್, ಭರತ್ ಬಿಲ್ಲವ, ಯಕ್ಷ ವೃಕ್ಷ ಸಮಿತಿಯಿ ದೀಪಕ್ ಶೆಟ್ಟಿ ಕರಾವಳಿ, ಪ್ರಕಾಶ ಮಾಕೋಡಿ, ಪಡುವರಿ ಗ್ರಾ.ಪಂ ಮಾಜಿ ಸದಸ್ಯ ಸಂಜೀವ ಮೊಗೇರ್, ಮಹಿಳಾ ಸಮಿತಿಯ ದೇವಕಿ ಬಿಲ್ಲವ, ಸುಜಾತ ರಾಮ ಪೂಜಾರಿ, ವಾಸು ಮರಾಠಿ ಹೊಸೂರು, ರಾಜೇಶ ಪೂಜಾರಿ ಹೊಸೂರು ಮೊದಲಾದವರು ಹಾಜರಿದ್ದರು.
ಕರಾವಳಿ ಸಂಭ್ರಮದ ಆಯೋಜಕ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಯುವಶಕ್ತಿ ಮಾಜಿ ಕಾರ್ಯದರ್ಶಿ ಮಹೇಶ್ ಮೊಗೇರ್ ವಂದಿಸಿದರು.