ಮೂಡ್ಲಕಟ್ಟೆ ಐ.ಎಂ.ಜೆ ಶಿಕ್ಷಣ ಸಂಸ್ಥೆಯಲ್ಲಿ ಜ.26ರಂದು ಗಣರಾಜ್ಯೋತ್ಸವ ದೇಶಭಕ್ತಿ ಓಟ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಮೂಡ್ಲಕಟ್ಟೆಯ ಐ.ಎಂ.ಜೆ ಶಿಕ್ಷಣ ಸಂಸ್ಥೆಯ ವತಿಯಿಂದ ಜ.26ರಂದು 74ನೇ ಗಣರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಆ ಪ್ರಯುಕ್ತ ದೇಶಭಕ್ತಿ ಓಟವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಮಹತ್ತರ ಸಂದೇಶವನ್ನು ನೀಡುವ ಆಶಯ ಹೊಂದಲಾಗಿದೆ ಎಂದು ಎಂ.ಐ.ಟಿ ಉಪ ಪ್ರಾಂಶುಪಾಲರಾದ ಮೆಲ್ವಿನ್ ಡಿಸೋಜ ಹೇಳಿದರು.

Call us

Click Here

ಅವರು ಸೋಮವಾರ ಕುಂದಾಪುರದ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.26ರ ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ನೆರವೇರಲಿದೆ. ಈ ಸಂದರ್ಭದಲ್ಲಿ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಸತೀಶ್ ಖಾರ್ವಿಯವರನ್ನು ಸನ್ಮಾನಿಸಲಾಗುವುದು. 9.15ಕ್ಕೆ ದೇಶಭಕ್ತಿಯ ಓಟಕ್ಕೆ ನಮ್ಮ ದೇಶದ ಗಡಿ ಭದ್ರತಾ ಪಡೆಯ ನಿವೃತ್ತ ಯೋಧರಾದ ಗಣಪತಿ ಖಾರ್ವಿಯವರು ಚಾಲನೆ ನೀಡಲಿದ್ದಾರೆ. ಈ ಓಟವು ಮೂಡ್ಲಕಟ್ಟೆ ಕಾಲೇಜಿನ ಆವರಣದಿಂದ ಆರಂಭಗೊಂಡು ಐ.ಎಂ. ಜಯರಾಮ್ ಶೆಟ್ಟಿ, ಸರ್ಕಲನ್ನು ಸುತ್ತುವರಿದು, ಕಾಲೇಜಿನ ಆವರಣಕ್ಕೆ ಮರು ಆಗಮಿಸಲಿದೆ. ಸುಮಾರು 500ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಯಶಸ್ವಿ ಉದ್ಯಮಿ ಹಾಗೂ ರಾಜಕಾರಣಿಯಾಗಿದ್ದ ಜಯರಾಮ ಶೆಟ್ಟಿ ಅವರು 1995ರಲ್ಲಿ ಮೂಡ್ಲಕಟ್ಟೆ, ನಾಗರತ್ನ ಭುಜಂಗ ಶೆಟ್ಟಿ ಟ್ರಸ್ಟ್ ಆರಂಭಿಸಿದರ. ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಟ್ರಸ್ಟ್ ರಚನೆಯ ಪ್ರಮುಖ ಉದ್ದೇಶವಾಗಿತ್ತು. ಇಂದು ತಾಂತ್ರಿಕ ಶಿಕ್ಷಣ ಸಂಸ್ಥೆಯ ಜೊತೆಗೆ ಪದವಿ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಹಾಗೂ ವಿದ್ಯಾ ಅಕಾಡೆಮಿಗಳನ್ನು ನಡೆಸಲಾಗುತ್ತಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಐಎಂಜೆಐಎಸ್ಸಿ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಎಂ.ಎನ್.ಸಿ ಪ್ರಾಂಶುಪಾಲರಾದ ಪ್ರೊ. ಜೆನಿಫರ್ ಮೆನೇಜಸ್, ಐಎಂಜೆಐಎಸ್ಸಿ ಉಪಪ್ರಾಂಶುಪಾಲರಾದ ಜಯಶೀಲ ಕುಮಾರ್ ಉಪಸ್ಥಿತರಿದ್ದರು.

Leave a Reply