ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.06: ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಸಹಯೋಗದೊಂದಿಗೆ ಆದಿತ್ಯವಾರ ಇಲ್ಲಿನ ಕಲಾಮಂದಿರಲ್ಲಿ ಜರುಗಿದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಲಯನ್ಸ್ ಕ್ಲಬ್ ರಾಜೀವ್ ಕೋಟ್ಯಾನ್ ಉದ್ಘಾಟಿಸಿದರು.
ಸುರೇಶ್ ಸಾಲಿಯಾನ್ ಅಧ್ಯಕ್ಹರು ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಇವರು ಅಧ್ಯಕ್ಹತೆ ವಹಿಸಿದರು. ಮುಖ್ಯ ಅತಿಥಿಯಾಗಿ ಜಯಕರ್ ಶೆಟ್ಟಿ, ಸಭಾಪತಿಗಳು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಅಧ್ಯಕ್ಷ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಹಾಗೂ ಅಭಯಹಸ್ತ ಚಾರಿಟೇಬಲ್ ಚಾರಿಟೇಬಲ್ ಟ್ರಸ್ಟ್ ನ ಶರತ್ ಕಾಂಚನ್ ಆನಗಳ್ಳಿ, ಪ್ರಶಾಂತ್ ತಲ್ಲೂರು, ಕಿರಣ್ ಕುಂದಾಪುರ ಇತರರು ಉಪಸ್ಥಿತ್ತರಿದ್ದರು.
ಕಾರ್ಯಕ್ರಮದಲ್ಲಿ ರಕ್ತದಾನಿಗಳು ಹಾಗೂ ರೋಗಿಗಳ ತುರ್ತು ಕರೆಗೆ ಸ್ಪಂದಿಸಿ ಸಕಾಲದಲ್ಲಿ ರಕ್ತದಾನಿಗಳನ್ನು ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗೆ ಪೊರೈಸಲು ಸಹಕರಿಸುತ್ತಿರುವ ಅಭಯಹಸ್ತ ದಿನೇಶ್ ಕಾಂಚನ್ ಬಾರಿಕೆರೆ ಹಾಗೂ ಅಭಯಹಸ್ತ ಅರವಿಂದ ಉಪ್ಪಿನಕುದ್ರು ಅವರನ್ನು ಸನ್ಮಾನಿಸಲಾಯಿತು…
ಭಾಸ್ಕರ್ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಮಹೇಂದ್ರ ಉಪ್ಪಿನಕುದ್ರು ಧನ್ಯವಾದಗೈದರು.