ಕೇಂದ್ರ ಬಜೆಟ್, ಮುಂದಿನ 25 ವರ್ಷಗಳ ಅಭಿವೃದ್ಧಿಯ ದೂರದೃಷ್ಠಿತ್ವ ಹೊಂದಿದೆ: ಶಿವಕುಮಾರ್ ಅಂಬಲಪಾಡಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಕೇಂದ್ರ ಬಜೆಟ್, ಮುಂದಿನ 25 ವರ್ಷಗಳ ಅಭಿವೃದ್ಧಿಯ ದೂರದೃಷ್ಠಿತ್ವದಿಂದ ಕೂಡಿದ ಒಂದು ಅತ್ಯುತ್ತಮ ಬಜೆಟ್ ಆಗಿದೆ. ನೀರಸ ಜಗತ್ತಿಗೆ ಭಾರತ ಒಂದೇ ಭರವಸೆ ಎಂಬ ಮಾತಿನಂತೆ ಈ ಸಾಲಿನ ಬಜೆಟ್, ಜನಸಾಮಾನ್ಯರ, ಮಹಿಳೆಯರ ಹಾಗೂ ರೈತಸ್ನೇಹಿಯಾಗಿದ್ದು, ಮೃತ ಕಾಲದ ಉತ್ತರದಾಯಿಯಾಗಿ ಮೂಡಿಬಂದಿದೆ ಎಂದು ಬಿಜೆಪಿ ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ ಹೇಳಿದರು.

Call us

Click Here

ಬೈಂದೂರು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಫೆಡರಲ್ ಸಿಸ್ಟಮ್ನಲ್ಲಿರುವ ಭಾರತದಂತಹ ದೇಶದಲ್ಲಿ ಇಂತಹ ಆಶಾದಾಯಕ ಬಜೆಟನ್ನು ಮಂಡಿಸಲು ನಿಖರವಾದ ದೂರದರ್ಶಿತ್ವ ಇಟ್ಟುಕೊಂಡಿರುವ ಸದೃಢ ಸಶಕ್ತ ಸರ್ಕಾರದಿಂದ ಮಾತ್ರ ಸಾಧ್ಯ. ಕೋವಿಡ್ನಂತಹ ಸಂಕಷ್ಟದ ಕಾಲದಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿಗೆ ಲಸಿಕೆ ನೀಡಿರುವ ಭಾರತ, ಯಾವ ರೀತಿ ದೇಶವನ್ನು ಅಭಿವೃದ್ಧಿ ಪಡಿಸಬೇಕೆಂಬ ಚಿಂತನೆ ಮತ್ತು ಸಪ್ತ ಸೂತ್ರಗಳೊಂದಿಗೆ ಸವಾಲುಗಳನ್ನು ಎದುರಿಸಿ ಆರ್ಥಿಕ ಶಿಸ್ತು ಕಾಪಾಡಿಕೊಂಡು ಮಂಡಿಸಿದ ಅಭಿವೃದ್ಧಿ ಪರ ಬಜೆಟ್ ಇದಾಗಿದೆ ಎಂದು ಶುಕ್ರವಾರ
ಸ್ವಾತಂತ್ರ್ಯಾನಂತರ ನೂತನ ಸೆಂಟ್ರಲ್ ವಿಸ್ತಾ ಯೋಜನೆಯ ಹಿನೆಲೆಯಲ್ಲಿ ಪ್ರಸಕ್ತ ಪಾರ್ಲಿಮೆಂಟ್ ಭವನದಲ್ಲಿ ಮಂಡಿಸಿರುವ ಕೊನೆಯ ಜತೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಇದಾಗಿದ್ದು, ಬಜೆಟ್ ಗಾತ್ರ ರೂ.೪೫.೦೩ಲಕ್ಷ ಕೋಟಿ, ವಿತ್ತೀಯ ಕೊರತೆ ೫.೯%.ರಷ್ಟಿದ್ದು, ೨೦೨೨-೨೩ರ ಬಜೆಟ್ಗೆ ಹೋಲಿಸಿದರೆ ೧೪% ಪ್ರಗತಿಯಾಗಿದೆ. ಅಭಿವೃದ್ಧಿಗೆ ಏಳು ಸೂತ್ರಗಳನ್ನು ಇಟ್ಟುಕೊಂಡು ಮಾಡಿದ ಪ್ರಥಮ ಬಜೆಟ್ ಎಂದರು.

ಕೇಂದ್ರ ವಿತ್ತ ಸಚಿವೆ ದೇಶದ ಬಹುಮುಖ್ಯ ನಾಲ್ಕು ಅವಕಾಶಗಳನ್ನು ಗುರುತಿಸಿ ಅದನ್ನು ಸದೃಢಗೊಳಿಸಲು ಪೂರಕ ವ್ಯವಸ್ಥೆಗಳನ್ನು ಒದಗಿಸಿದ್ದಾರೆ. ಮಹಿಳೆಯರ ಆರ್ಥಿಕ ಸಶಕ್ತೀಕರಣ, ಮಹಿಳಾ ಉಳಿತಾಯ ಪತ್ರ ಬಿಡುಗಡೆ ಮತ್ತು ೮೧ ಲಕ್ಷ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು, ವಿಶ್ವಕರ್ಮ ಕೌಶಲ್ಯ ಸಮ್ಮಾನ ಯೋಜನೆಯನ್ನು ರೂಪಿಸಿ ಎಲ್ಲಾ ತರಹದ ಕುಶಲ ಕರ್ಮಿಗಳಿಗೆ ಸಹಾಯ, ದೇಶದ ೫೦ ಪ್ರವಾಸಿ ಕೇಂದ್ರ ಗುರುತಿಸಿ, ಅಗತ್ಯ ಪ್ರಚಾರ, ಅಭಿವೃದ್ಧಿ ಮಾಹಿತಿ ನೀಡುವುದು ಹಾಗೂ ಹಸಿರು ಇಂಧನ ಹಸಿರು ಶಕ್ತಿ, ಹಸಿರು ಕೃಷಿ, ಹಸಿರು ಸಾರಿಗೆ, ಹಸಿರು ಕಟ್ಟಡ, ಹಸಿರು ಉಪಕರಣ, ಇಂಗಾಲದ ಹೊರ ಸೂಸುವಿಕೆ ತಡೆಯುವುದು.
ಬಜೆಟ್ ವಿನಿಯೋಗವನ್ನು ೭ ಮಜಲುಗಳನ್ನಾಗಿ ವಿಂಗಡಿಸಿ ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿ, ಹಣಕಾಸನ್ನು ಒದಗಿಸಿ ದೇಶವು ತ್ವರಿತಗತಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವಂತೆ ಮಾಡುವ ಉದ್ದೇಶದಿಂದ ಸಪ್ತಸೂತ್ರಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಶ್ರೀ ಅನ್ನ ಯೋಜನೆ, ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಧ್ಯಮ ವರ್ಗಕ್ಕೆ ಸರ್ವ ಸಹಕಾರ, ಕೌಶಲ್ಯಾಭಿವೃದ್ಧಿ ಮೂಲಕ ಯುವ ಶಕ್ತಿಗೆ ಉತ್ತೇಜನ ನೀಡಿದ್ದಾರೆ ಎಂದ ಅವರು, ರಸ್ತೆ, ರೈಲು, ಮುಂತಾದ ಮೂಲ ಸೌಕರ್ಯಕ್ಕೆ ದಾಖಲೆ ಮಟ್ಟದ ಹಣ ಬಿಡುಗಡೆ ಮಾಡಲಾಗಿದೆ. ಈ ಪ್ರಮಾಣದಲ್ಲಿ ಕಳೆದ ವರ್ಷಕ್ಕಿಂತ ೩೩% ಹೆಚ್ಚಳವಾಗಿದೆ. ೧೦೦ ಹೆಚ್ಚಿನ ಲ್ಯಾಬ್ ಸ್ಥಾಪನೆ ಹಾಗೂ ಎಲ್ಲಾ ವಲಯಕ್ಕೆ ೫ಜಿ ಸೇವೆಗೆ ಆದ್ಯತೆ ನೀಡಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಬರುವ ಮೊದಲು ಬಜೆಟ್ ಗಾತ್ರ ರೂ.೧೫.೦೦ಲಕ್ಷ ಕೋಟಿ ಆಗಿದ್ದು, ಪ್ರಸಕ್ತ ಬಜೆಟ್ ಗಾತ್ರ ರೂ.೪೫.೦೩ಲಕ್ಷ ಕೋಟಿ ಆಗಿರುತ್ತದೆ. ಅಂದರೆ ೩ ಪಟ್ಟು ಹೆಚ್ಚಳವಾಗಿದೆ. ಅದೇ ರೀತಿ ೨೦೧೩ರಲ್ಲಿ ದೇಶದ ಜಿ.ಡಿ.ಪಿ. ರೂ.೧೧೨.೦೦ ಲಕ್ಷ ಕೋಟಿ ಆಗಿದ್ದು, ಈಗ ರೂ.೨೭೦.೦೦ ಲಕ್ಷ ಕೋಟಿ ಆಗಿರುತ್ತದೆ. ಅಂದರೆ ೨೧/೨ ಪಟ್ಟು ಹೆಚ್ಚಳವಾಗಿದೆ. ಬಿಜೆಪಿ ಸರಕಾರ ಬರುವ ಮೊದಲು ವಿಶ್ವದಲ್ಲಿ ಭಾರತ ೧೦ನೇ ಆರ್ಥಿಕ ಶಕ್ತಿಯಾಗಿತ್ತು. ಪ್ರಸಕ್ತ ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ವಿಶ್ವದ ೫ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಐ.ಎಂ.ಎಫ್., ವಿಶ್ವ ಬ್ಯಾಂಕ್ ಮತ್ತು ತಜ್ಞರ ಅಂದಾಜಿನ ಪ್ರಕಾರ ೨೦೩೦ಕ್ಕೆ ಭಾರತ ೩ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ೨೦೪೫ಕ್ಕೆ ಭಾರತ ೨ನೇ ಆರ್ಥಿಕ ಶಕ್ತಿಯಾಗಲಿದೆ.ದೇಶದ ವಿದೇಶಿ ವಿನಿಮಯ ಗಾತ್ರ ೬೦೦ ಬಿಲಿಯನ್ ಡಾಲರ್ ತಲುಪಿದೆ. ದೇಶದ ಅಭಿವೃದ್ಧಿಯ ಧನಾತ್ಮಕ ಚಿಂತನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಹಾಗೂ ಸದೃಢ ಸರಕಾರದಿಂದ ಮಾತ್ರ ಇಂತಹ ಅಭಿವೃದ್ಧಿ ಪರ ಬಜೆಟ್ ಮೂಲಕ ಐತಿಹಾಸಿಕ ಸಾಧನೆ ಸಾಧ್ಯವಾಗಲಿದೆ ಎಂದರು.

ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರ್ ಇದ್ದರು.

Click here

Click here

Click here

Click Here

Call us

Call us

Leave a Reply