ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಫೆ.27: ಇಲ್ಲಿನ ಹೊಸ್ ಬಸ್ ನಿಲ್ದಾಣದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಳವಡಿಸಲು ವಿವಿಧ ಸಂಘ ಸಂಸ್ಥೆಗಳಿಂದ ಒಟ್ಟು ನಾಲ್ಕು ಬ್ಯಾರಿಕೇಡ್’ಗಳನ್ನು ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಲಾಯಿತು.
ತಾಲೂಕಿನ ಬೈಂದೂರು ಅರ್ಬನ್ ಸೌಹಾರ್ದ ಸಹಕಾರಿ ಸಂಘ ನಿ., ಶ್ರೀ ರಾಮ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಜೆಸಿಐ ಬೈಂದೂರು ಸಿಟಿ ಹಾಗೂ ಇಲೆಕ್ಟ್ರಿಕ್ ಕಂಟ್ರಾಕ್ಟರ್ ಸಂಘ ಬೈಂದೂರು ಪ್ರಾಯೋಜಕತ್ವದಲ್ಲಿ 4 ಬ್ಯಾರಿಕೇಡ್ ಗಳನ್ನು ಬೈಂದೂರು ಠಾಣಾಧಿಕಾರಿ ನಿರಂಜನ್ ಗೌಡ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಎಸ್. ರಾಜು ಪೂಜಾರಿ, ಮಣಿಕಂಠ ಎಸ್. ದೇವಾಡಿಗ, ಮಂಜು ಶೇರುಗಾರ್ , ನರೇಂದ್ರ ಶೇಟ್ , ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನವೀನ್ ಕುಮಾರ್, ಸವೀತಾ ದಿನೇಶ್, ಗಣೇಶ್ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.