ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇನ್ನರ್ ವೀಲ್ ಕ್ಲಬ್ ಬೈಂದೂರು ಇವರಿಂದ ರತ್ತುಬಾಯಿ ಜನತಾ ಪ್ರೌಢಶಾಲೆಗೆ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು
ಜಿಲ್ಲಾಧ್ಯಕ್ಷೆ ಕವಿತಾ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಅವರು ಹಸ್ತಾಂತರಿಸಿದರು ದಾನಿಗಳಾದ ಶಾರದ ನಾರಾಯಣ ಮತ್ತು ಜ್ಯೋತಿ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಸ್ಥಾಪಕ ಅಧ್ಯಕ್ಷೆ ಚಂದ್ರಲೇಖ ಶೆಟ್ಟಿ ಹಾಗೂ ಇನ್ನರ್ ವೀಲ್ ಅಧ್ಯಕ್ಷೆ ಭಾನುಮತಿ ಬಿ.ಕೆ ಮತ್ತು ಕಾರ್ಯದರ್ಶಿ ಪಿಂಕಿ ಮೋಬಿ ಉಪಸ್ಥಿತರಿದ್ದರು
ಶಾಲಾ ಮುಖ್ಯೋಪಾಧ್ಯಾಯ ಶ್ರೀಆನಂದ ಮದ್ದೋಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಚೈತ್ರಾ ನಿರೂಪಣೆ ಮಾಡಿದರು. ಪ್ರಕಾಶ್ ಮಾಕೋಡಿ ವಂದಿಸಿದರು