Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಲಂಡನ್‌ನಲ್ಲಿ ಸಪ್ತತಾಂಡವ ನೃತ್ಯ ಪ್ರದರ್ಶನ
    ಊರ್ಮನೆ ಸಮಾಚಾರ

    ಲಂಡನ್‌ನಲ್ಲಿ ಸಪ್ತತಾಂಡವ ನೃತ್ಯ ಪ್ರದರ್ಶನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಸಾಂಸ್ಕೃತಿಕ ಪ್ರಸಾರ ಮತ್ತು ಉನ್ನತಿಗಾಗಿ ಇಂಗ್ಲಂಡ್ನಲ್ಲಿ ಕ್ರಿಯಾಶೀಲವಾಗಿರುವ ’ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್’ ಈಚೆಗೆ ಲಂಡನ್ನ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಿದ್ದ ಶಿವರಾತ್ರಿ ಉತ್ಸವದಲ್ಲಿ ’ಸಪ್ತತಾಂಡವ’ ನೃತ್ಯ ಪ್ರದರ್ಶನ ಸಂಪನ್ನವಾಯಿತು.

    Click Here

    Call us

    Click Here

    ಭಾರತದ ವಿವಿಧ ರಾಜ್ಯಗಳಿಗೆ ಸೇರಿದ ನೃತ್ಯ ಕಲಾವಿದರಾದ ಶಿವಾನಿ ಭಂಡಾರ್ಕಾರ್, ಆರ್ಯ ಅರುಣ್, ಲಕ್ಷ್ಮೀ ಅವೀನ್, ರಾಗಸುಧಾ ವಿಂಜಮೂರಿ, ಮಂಜು ಸುನಿಲ್, ಡಾ. ಪ್ರೀತಾ ದಶ್ಮ್ಮಹಾಪಾತ್ರ ಭರತನಾಟ್ಯ, ಕಥಕ್, ಒಡಿಸ್ಸಿ, ಕುಚಿಪುಡಿ, ಮೋಹಿನಿಯಾಟ್ಟಮ್ ನೃತ್ಯ ಪ್ರಕಾರಗಳ ಶಿವತಾಂಡವ ಪ್ರದರ್ಶಿಸಿದರೆ, ಕರ್ನಾಟಕದ ಯೋಗೀಂದ್ರ ಮರವಂತೆ ಯಕ್ಷಗಾನ ಶೈಲಿಯ ತಾಂಡವನೃತ್ಯ ಸಾದರಪಡಿಸಿದರು. ರಾಗಸುಧಾ ವಿಂಜಮೂರಿ ’ಶಿವೋಹಮ್’ ಹೆಸರಿನಲ್ಲಿ ಈ ವಿನೂತನ ನೃತ್ಯಸಂಗಮವನ್ನು ಕಲ್ಪಿಸಿ, ನಿರ್ದೇಶಿಸಿದ್ದರು. ನೃತ್ಯಗಳಿಗೆ ಆಯಾ ಭಾಷೆಯಲ್ಲಿ ಶಿವಧ್ಯಾನ ಶ್ಲೋಕ ಮತ್ತು ಗೀತೆಗಳನ್ನು ಬಳಸಲಾಗಿತ್ತು. ಯಕ್ಷಗಾನಕ್ಕೆ ಭಾಗವತ ಪ್ರಸನ್ನ ಭಟ್ ಬಾಳ್ಕಲ್ಲು ಅವರು ಹಾಡಿದ ಯಕ್ಷಗಾನ ಶೈಲಿಯ ಶಿವಸ್ತುತಿಗೆ ರಾಘವೇಂದ್ರ ಹೆಗಡೆ ಯಲ್ಲಾಪುರ ಅವರ ಮದ್ದಲೆ ವಾದನ ಇರುವ ಧ್ವನಿ ಮುದ್ರಣದ ನೆರವು ಪಡೆಯಲಾಗಿತ್ತು. ಆರಂಭದಲ್ಲಿ ೨೧ ಮಂದಿ ಕಿರಿಯ ಕಲಾವಿದರು ಪ್ರಾರ್ಥನಾ ನೃತ್ಯ ಪ್ರದರ್ಶಿಸಿದರು. ವಿಶಿಷ್ಟ ಕಾರ್ಯಕ್ರಮವು ಇಂಗ್ಲೆಂಡ್ನ ವಿವಿಧೆಡೆಯಿಂದ ಬಂದಿದ್ದ ಮುನ್ನೂರಕ್ಕೂ ಅಧಿಕ ಪ್ರೇಕ್ಷಕgರನ್ನು ಮಂತ್ರಮುಗ್ಧಗೊಳಿಸಿತು.

    ಮುಖ್ಯ ಅತಿಥಿಯಾಗಿದ್ದ ಖ್ಯಾತ ಲೇಖಕ, ಲಂಡನ್ ನೆಹರು ಸೆಂಟರ್ನ ನಿರ್ದೇಶಕ ಅಮಿಷ್ ತ್ರಿಪಾಠಿ ಶಿವರಾತ್ರಿಯ ಮಹತ್ವವನ್ನು ವಿವರಿಸಿ ಕಾರ್ಯಕ್ರಮವನ್ನು ಬಹುವಾಗಿ ಶ್ಲಾಘಿಸಿದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ. ಮತ್ತೂರು ನಂದಕುಮಾರ್ ಕಲಾವಿದರನ್ನು ಗೌರವಿಸಿದರು. ಸುಶಿಲ್ ರಪ್ತಾವರ್ ವಂದಿಸಿದರು. ರಾಧಿಕಾ ಜೋಷಿ ಮತ್ತು ರಾಜ್ ಅಗರ್ವಾಲ್ ನಿರೂಪಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ: ಐಎಂಜೆ ಸಂಸ್ಥೆಗಳಲ್ಲಿ ‘ಭಾರತದ ವೈಜ್ಞಾನಿಕ ಪರಂಪರೆ’ ಕುರಿತು ವಿಶೇಷ ಉಪನ್ಯಾಸ

    10/07/2026

    ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ವೈದ್ಯರ ದಿನಾಚರಣೆ ಆಚರಣೆ

    10/07/2026

    ಸಾಧನೆಯ ಹಾದಿಯಲ್ಲಿ ಸಾಧಕರ ಬದುಕು ನಮಗೆ ಮಾದರಿಯಾಗಲಿ: ಅನಂತ ಪದ್ಮನಾಭ ಭಟ್

    10/07/2026
    Leave A Reply Cancel Reply

    5 × 4 =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ: ಐಎಂಜೆ ಸಂಸ್ಥೆಗಳಲ್ಲಿ ‘ಭಾರತದ ವೈಜ್ಞಾನಿಕ ಪರಂಪರೆ’ ಕುರಿತು ವಿಶೇಷ ಉಪನ್ಯಾಸ
    • ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ವೈದ್ಯರ ದಿನಾಚರಣೆ ಆಚರಣೆ
    • ಸಾಧನೆಯ ಹಾದಿಯಲ್ಲಿ ಸಾಧಕರ ಬದುಕು ನಮಗೆ ಮಾದರಿಯಾಗಲಿ: ಅನಂತ ಪದ್ಮನಾಭ ಭಟ್
    • ಕುಂದಾಪುರ ತಹಶೀಲ್ದಾರರಾಗಿ ವಸಂತ ಕುಮಾರ ಅಧಿಕಾರ ಸ್ವೀಕಾರ
    • ಶಕ್ತಿ ಕೇಂದ್ರದಲ್ಲಿ ಬಿಜೆಪಿಯ ಗೆಲುವಿನ ಶಕ್ತಿಯಿದೆ: ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.