ಕರ್ಕುಂಜೆ: ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಶಾಲೆಗೆ ವಿವಿಧ ಕೊಡುಗೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜೇಸಿಐ ಉಪ್ಪುಂದ,ಸ್ವಸ್ತಿ ಶ್ರೀ ಜ್ಯುವೆಲ್ಲರ್ ನೇರಳಕಟ್ಟೆ, ಕರ್ನಾಟಕ ಸರ್ಕಾರ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಉಡುಪಿ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಕರ್ಕುಂಜೆ, ಪ್ರಾಥಮಿಕ ಆರೋಗ್ಯ ಕೇಂದ್ರ ವಂಡ್ಸೆ, ಚಾಲಕರು ಮತ್ತು ಮಾಲಕರು ಸರ್ಕಲ್ ಫ್ರೆಂಡ್ಸ್ ನೇರಳಕಟ್ಟೆ, ಟೆಂಪಲ್ ಫ್ರೆಂಡ್ಸ್ ನೇರಳಕಟ್ಟೆ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕುಂಜೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಶಾಲೆಗೆ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು.

Call us

Click Here

ಜೇಸಿಐ ಉಪ್ಪುಂದದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಕಾರೀಕಟ್ಟೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪ್ರಮೋದ್ ಚಂದ್ರ ಶೆಟ್ಟಿ ಇವರು ನೆರವೇರಿಸಿದ್ದರು.

ಮುಖ್ಯ ಅತಿಥಿಗಳಾದ ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಶ್ರೀಜಿತ್ ಕೆ ಶಾಲೆಗೆ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಿದರು. ಶಾಲೆಗೆ ಕುರ್ಚಿಗಳನ್ನು ನೀಡಿದ ಶ್ರೀಜಿತ್ ಕೆ, ಮತ್ತು ಧ್ವನಿ ವರ್ಧಕವನ್ನು ನೀಡಿದಂತಹ ಸ್ವಸ್ತಿ ಶ್ರೀ ಜ್ಯುವೆಲ್ಲರ್ಸ್ ಮಾಲಕರಾದ ಚಂದ್ರಶೇಖರ್ ಆಚಾರ್ಯ ಮತ್ತು ಪ್ರಮೋದ್ ಬೇಕರಿ ವಂಡ್ಸೆ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ್ ಪೂಜಾರಿ, ನೇರಳಕಟ್ಟೆ ಹಿರಿಯ ನಾಗರಿಕರಾದ ನಾರಾಯಣ್ ನಾಯ್ಕ್, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ವೈದ್ಯಾಧಕಾರಿಯಾದ ಮನೋಜ್ ಭಟ್ , ಶಾಲಾ ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಸಂತೋಷ್ ದಾಸ್, ಅಶೋಕ್ ಕುಮಾರ್ ಶೆಟ್ಟಿ ಜಾಡ್ಕಟ್ಟು, ಗ್ರಾಮ ಪಂಚಾಯತ್ ಸದಸ್ಯರಾದಂತಹ ನಾಗರಾಜ್ ಶೆಟ್ಟಿ,ಕೆನರಾ ಬ್ಯಾಂಕಿನ ಹಿರಿಯ ಪ್ರಬಂಧಕರಾದಂತಹ ಪ್ರಭಾಕರ್ ಶೆಟ್ಟಿ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಪ್ರತಿನಿಧಿಯಾದಂತಹ ಶಂಕರ್ ಶೆಟ್ಟಿ, ಆಶಾ ಕಾರ್ಯಕರ್ತೆಯರು ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ನಾರಾಯಣ್ ಕೊಠಾರಿಯವರು ಸ್ವಾಗತಿಸಿ ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply