ಗಂಗೊಳ್ಳಿ: ಎಸ್.ಎಸ್.ಎಫ್ ವತಿಯಿಂದ ‘ಉಚಿತ ವೃತ್ತಿ ಮಾರ್ಗದರ್ಶನ, ಪ್ರೇರಣಾ ಶಿಬಿರ’

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ,ಮಾ.5:
ಎಸ್.ಎಸ್.ಎಫ್ (ಸುನ್ನಿ ಸ್ಟುಡೆಂಟ್ ಫೆಡರೇಶನ್) ಗಂಗೊಳ್ಳಿ ಶಾಖೆ ವತಿಯಿಂದ ಇಲ್ಲಿನ ಸುಲ್ತಾನ್ ಮೊಹಲ್ಲಾದ ಬಿಷಾರತುಲ್ ಅರೇಬಿಕ್ ಮದ್ರಸದಲ್ಲಿ ’ಉಚಿತ ವೃತ್ತಿ ಮಾರ್ಗದರ್ಶನ, ಪ್ರೇರಣಾ ಶಿಬಿರ ಮತ್ತು ವಿದ್ಯಾರ್ಥಿವೇತನ ಜಾಗೃತಿ ಕಾರ್ಯಕ್ರಮ ಭಾನುವಾರ ಜರುಗಿತು.

Call us

Click Here

8 ರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಈ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪುತ್ತೂರಿನ ಕಮ್ಯೂನಿಟಿ ಸೆಂಟರಿನ ಪ್ರಧಾನ ಕಾರ್ಯದರ್ಶಿ ಮತ್ತು ಶೈಕ್ಷಣಿಕ ಮಾರ್ಗದರ್ಶಕರಾದ ‘ಹನೀಫ್ ಪುತ್ತೂರು’ ಹಾಗೂ ಸೆಂಟರಿನ ನುರಿತ ಕೌನ್ಸಿಲರ್ ರಾದ ಇಮ್ತಿಯಾಝ್ ಪುತ್ತೂರು ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ, ವೃತ್ತಿ ಮಾರ್ಗದರ್ಶನ, ಕೌನ್ಸಿಲಿಂಗ್, ಜಾಗತಿಕ ಅವಕಾಶಗಳು, ಭವಿಷ್ಯದ ಬೆದರಿಕೆ ಮತ್ತು ತಯಾರಿಯ ಕುರಿತಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಆಗುವಂತೆ ವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗಂಗೊಳ್ಳಿ ಜಮತುಲ್ ಮುಸ್ಲಿಮೀನ್ ಕಮಿಟಿಯ ಅಧ್ಯಕ್ಷರಾದ ಪಿ.ಎಮ್. ಹಸೈನಾರ್, ಸುಲ್ತಾನ್ ಮೊಹಲ್ಲಾ ಮಸೀದಿಯ ಇಮಾಮರಾದ ಷರೀಫ್ ಸಹದಿ ಉಸ್ತಾದ್, ಸುನ್ನಿ ಸ್ಟೂಡೆಂಟ್ ಫೆಡರೇಶನ್ ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಅಶಿಮ್ ಗಂಗೊಳ್ಳಿ ಹಾಗೂ ಅಲ್ಪೈನ್ ಅಸೋಸಿಯೇಟ್ಸ್ ಮಾಲಕರಾದ ಝಹೀರ್ ನಾಖುದಾ ಉಪಸ್ಥಿತರಿದ್ದರು.

Leave a Reply