ಕುಂದಾಪುರ: ಪದವಿ ಪರೀಕ್ಷೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿಗೆ 8 ರ‍್ಯಾಂಕ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್ 2022ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ‍್ಸ್ ಕಾಲೇಜಿಗೆ ಎಂಟು ರ‍್ಯಾಂಕ್‌ಗಳು ದೊರಕಿವೆ.

Call us

Click Here

ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರು ತಾಲೂಕಿನ ಯಡ್ತೆರೆ ಗ್ರಾಮದ ಗೋವಿಂದ ಪೂಜಾರಿ ಅವರ ಪುತ್ರಿ ದೀಕ್ಷಾ ಅವರಿಗೆ ನಾಲ್ಕನೇ ರ‍್ಯಾಂಕ್ ಮತ್ತು ಬೈಂದೂರು ತಾಲೂಕಿನ ಕೊಡೇರಿ ಗ್ರಾಮದ ಕೃಷ್ಣ ಪೂಜಾರಿ ಅವರ ಅವರ ಪುತ್ರಿ ರಮಿತಾ ಅವರಿಗೆ ಆರನೇ ರ‍್ಯಾಂಕ್ ಕುಂದಾಪುರದ ಕಂದಾವರ ಗ್ರಾಮದ ನಾಗಭೂಷಣ ಅವರ ಪುತ್ರಿ ಸ್ಪೂರ್ತಿ ಅವರಿಗೆ ಎಂಟನೇ ರ‍್ಯಾಂಕ್, ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ರವೀಂದ್ರ ಶೆಟ್ಟಿ ಅವರ ಪುತ್ರ ರಕ್ಷಿತ್ ಕುಮಾರ್ ಶೆಟ್ಟಿ ಅವರಿಗೆ ಒಂಬತ್ತನೇ ರ‍್ಯಾಂಕ್ ದೊರೆತಿದೆ.

ಬಿ.ಎಸ್.ಸಿ ಪದವಿ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗುರುದತ್ತ ಪೈ ಅವರ ಪುತ್ರ ಸನತ್ ಗುರುದತ್ತ ಪೈ ಅವರಿಗೆ ಏಳನೇ ರ‍್ಯಾಂಕ್ ದೊರೆತಿದೆ.

ಬಿ ಕಾಂ ಪರೀಕ್ಷೆಯಲ್ಲಿ ಕುಂದಾಪುರದ ತಾಲೂಕಿನ ಕೋಟೇಶ್ವರ ಗ್ರಾಮದ ಪ್ರಸನ್ನ ಹೆಬ್ಬಾರ್ ಇವರ ಪುತ್ರಿ ಪ್ರತೀಕ್ಷಾ ಇವರಿಗೆ ಒಂಬತ್ತನೇ ರ‍್ಯಾಂಕ್ ದೊರೆತಿದೆ.

ಬಿ.ಬಿ.ಎ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಹೆಮ್ಮಾಡಿ ಗ್ರಾಮದ ಅಬ್ದುಲ್ ರೆಹಮಾನ್ ಅವರ ಪುತ್ರಿ ಶಾಹಿನಾ ಅವರಿಗೆ ಆರನೇ ರ‍್ಯಾಂಕ್ ಮತ್ತು ಕುಂದಾಪುರದ ಆಸ್ಟಿನ್ ಮೆಂಡೊನ್ಸಾ ಅವರ ಪುತ್ರಿ ಅಲಸ್ಟಿನ್ ಮೆಂಡೊನ್ಸಾ ಅವರಿಗೆ ಏಳನೇ ರ‍್ಯಾಂಕ್ ದೊರೆತಿದೆ.

Click here

Click here

Click here

Click Here

Call us

Call us

ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗದು ಬಹುಮಾನ ವಿಜೇತರು:
ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ‍್ಸ್ ಕಾಲೇಜಿನ ಇಬ್ಬರೂ ವಿದ್ಯಾರ್ಥಿಗಳಿಗೆ ನಗದು ಬಹುಮಾನ ದೊರಕಿವೆ.

ಎ.ಬಿ ಶೆಟ್ಟ ಶತಮಾನೋತ್ಸವ ಸಮಿತಿ, ಬಂಟ್ಸ್ ಯಾನೆ ನಾಡವರ ಸಂಘ ಮಂಗಳೂರು ಇವರು ಕೊಡುವ ಎ.ಬಿ ಶೆಟ್ಟಿ ನಗದು ಬಹುಮಾನವು ಬಿಕಾಂ ವಿದ್ಯಾರ್ಥಿನಿ ಎಸ್.ಕುಮಾರ್ ಅವರ ಪುತ್ರಿ ಪಂಚಮಿ) ಅವರಿಗೆ ದೊರೆತಿದೆ.

ಶ್ರೀ ಮಹಾವೀರ ಕಾಲೇಜು ಮೂಡಬಿದ್ರಿ ಇವರು ನೀಡುವ ಡಾ.ಟಿ.ಎಮ್.ಎ ಪೈ ನಗದು ಬಹುಮಾನವು ಬಿ.ಎಸ್.ಸಿ ವಿದ್ಯಾರ್ಥಿನಿ ಕುಂದಾಪುರದ ಚಂದ್ರಶೇಖರ ಅವರ ಪುತ್ರಿ ದೀಪ್ತಿ ಶೇರೇಗಾರ್ ಅವರಿಗೆ ದೊರೆತಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Leave a Reply