15 ಮಂದಿಗೆ ಡಾ. ಶಿವರಾಮ ಕಾರಂತ ಮಹಿಳಾ ಸಾಧಕ ಪುರಸ್ಕಾರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ಡಾ. ಶಿವರಾಮ ಕಾರಂತ ಮಹಿಳಾ ಸಾಧಕ ಪುರಸ್ಕಾರಕ್ಕೆ ರೇವತಿ ಶೆಟ್ಟಿ ಮಣೂರು ಪಡುಕೆರೆ, ಸುಧಾ ಕದ್ರಿಕಟ್ಟು, ತನುಜಾ ಕೋಟೇಶ್ವರ, ಸುಶ್ಮಿತಾ ಸಾಲಿಗ್ರಾಮ, ನಿಶಾ ಸಾಲಿಗ್ರಾಮ, ವೀಣಾ ನಾಯಕ್, ಮಾಲಿನಿ ರಮೇಶ್, ಸುಮನ ಹೇರ್ಳೆ, ಸುಶ್ಮಿತಾ ಪಾರಂಪಳ್ಳಿ, ಸ್ಪೂರ್ತಿ, ಲಲಿತಾ ನಾರಿ, ಶೋಭಾ ಗಾಣಿಗ, ಸುಪ್ರೀತಾ ಪುರಾಣಿಕ್, ಪ್ರತಿಮಾ ಯಡ್ತಾಡಿ, ಚೈತ್ರಾ ಆಚಾರ್ಯ ಕೋಟ, ಅವರನ್ನು ಆಯ್ಕೆ ಮಾಡಲಾಗಿದೆ.

Call us

Click Here

ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಮಾರ್ಚ್ 29 ರಂದು ಸಂಜೆ 6 ಗಂಟೆಗೆ ನಡೆಯುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಎಂದು ಡಾ. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply