ಕುಂದಾಪುರ: ನವೀಕೃತ ಶಾಸ್ತ್ರೀ ವೃತ್ತ ಲೋಕಾರ್ಪಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಗರದ ಶಾಸ್ತ್ರೀ ವೃತ್ತವನ್ನು ನವೀಕರಣಗೊಳಿಸಲಾಗಿದ್ದು, ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅವರು ಲಾಲ್ ಬಹದ್ದೂರ್ ಶಾಸ್ತ್ರೀಯವರ ನೂತನ ಪುತ್ಥಳಿ ಅನಾವರಣಗೊಳಿಸಿ, ಮಾಲಾರ್ಪಣೆಗೈದು ಲೋಪಾರ್ಪಣೆಗೊಳಿಸಿದರು.

Call us

Click Here

ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಮಾತನಾಡಿ, ಶಾಸ್ತ್ರೀ ವೃತ್ತದ ಮರು ನಿರ್ಮಾಣ ಕಾರ್ಯ ಸುಂದರವಾಗಿ ಮೂಡಿಬಂದಿದೆ. ಇದು ಸುಂದರ ಕುಂದಾಪುರಕ್ಕೆ ನೂತನ ಕೊಡುಗೆಯಾಗಿದೆ ಎಂದರು.

1963ರಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಅವರ ಕುಟುಂಬ ಹೆದ್ದಾರಿ ನಿರ್ಮಾಣ ಸಂದರ್ಭ ಶಾಸ್ತ್ರೀ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿತ್ತು. ನವೀಕೃತ ಪ್ರತಿಮೆಯನ್ನೂ ಅವರದೇ ಕುಟುಂಬ ಕೊಡಮಾಡಿದೆ. ಪುರಸಭಾ ನಗರೋತ್ಥಾನ ನಿಧಿ ಹಾಗೂ ಚಾರ್ಮಕ್ಕಿ ನಾರಾಯಣ ಶೆಟ್ಟಿ ಟ್ರಸ್ಟ್ ಸಹಯೋಗದೊಂದಿಗೆ ಶಾಸ್ತ್ರೀವೃತ್ತ ನಿರ್ಮಿಸಲಾಗಿದೆ ಎಂದರು.

ಈ ವೇಳೆ ಕುಂದಾಪುರ ಪುರಸಭೆಯ ನಿಕಟಪೂರ್ವ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಶಾಸ್ತ್ರೀ ಪ್ರತಿಮೆ ನಿರ್ಮಿಸಿದ ಶಿಲ್ಪಿ ಶ್ರೀತನ್ ಶೆಟ್ಟಿಗಾರ್, ಶಿಲಾಮಂಟಕ ಕಾರ್ಯ ನಿರ್ವಹಿಸಿದ ಅನಂತಕೃಷ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ಸಂದೀಪ್ ಖಾರ್ವಿ, ಹಿರಿಯ ಸದಸ್ಯರಾದ ಮೋಹನದಾಸ ಶೆಣೈ, ದೇವಕಿ ಸಣ್ಣಯ್ಯ, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಪುರಸಭಾ ಮುಖ್ಯಾಧಿಕಾರಿ ಮಂಜುನಾಥ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply