ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಸಾರ್ವತ್ರಿಕ ಚುನಾವಣೆ -2023ರಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು ಶೇ. 78.57ಮತದಾನವಾಗಿದೆ.
ಜಿಲ್ಲೆಯ ಬೈಂದೂರು ವಿಧಾನಸಭಾ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.77.86, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.78.94 ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 75.85%, ಕಾಪು ವಿಧಾನಸಭಾ ಕ್ಷೇತ್ರದಲ್ಲಿ 79.44%, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶೇ.81.30% ಮತದಾನವಾಗಿದೆ.

ಅಮಾಸೆಬೈಲುವಿನಲ್ಲಿ ಹಿರಿಯರೊಂದಿಗೆ ಯುವ ಸಮುದಾಯ ಮತದಾನದಲ್ಲಿ ಪಾಲ್ಗೊಂಡಿರುವುದು ನಾವುಂದ ಸಖಿ ಮತಗಟ್ಟೆಯಲ್ಲಿ ಮೊದಲ ಭಾರಿ ಮತದಾನ ಮಾಡಿದ ಖುಷಿಯಲ್ಲಿ ಯುವತಿಯರು ಉಡುಪಿ ಡಿಸಿ ಕೂರ್ಮರಾವ್ ಎಂ ಪತ್ನಿಯೊಂದಿಗೆ ಮತದಾನ ಮಾಡಿದರು ತಗ್ಗರ್ಸೆಯಲ್ಲಿ 108 ವರ್ಷದ ವೃದ್ಧೆ ಮತದಾನದಲ್ಲಿ ಪಾಲ್ಗೊಂಡಿರುವುದು ಕೋಟೇಶ್ವರ ಸರಕಾರಿ ಪ.ಪೂ. ಕಾಲೇಜು ಯಕ್ಷಗಾನ ಮತಗಟ್ಟೆ

ಜಿಲ್ಲೆಯಲ್ಲಿ ಬೆಳಿಗ್ಗೆ 9 ಗಂಟೆಯ ತನಕ ಒಟ್ಟು ಶೇ.13.28 ಮತದಾನವಾಗಿದ್ದು, ಬೆಳಿಗ್ಗೆ 11 ಗಂಟೆಯ ತನಕ ಶೇ.30.26 ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ತನಕ ಶೇ.47.8 ಮತದಾನವಾಗಿದ್ದು, 3 ಗಂಟೆಯ ತನಕ ಶೇ.60.3 ಮತದಾನವಾಗಿದೆ.ಸಂಜೆ 5 ಗಂಟೆಯ ತನಕ ಒಟ್ಟು ಶೇ.73.75 ಮತದಾನವಾಗಿದ್ದರೆ, ಮತದಾನ ಮುಕ್ತಾಯದ ವೇಳೆಗೆ ಒಟ್ಟು ಶೇ.78.57 ಮತದಾನವಾಗಿದೆ.
ಇದನ್ನೂ ಓದಿ: ► ಜಿಲ್ಲೆಯಲ್ಲಿ ಶಾಂತಿಯುತ ಮತದಾನ. ಮತಯಂತ್ರದೊಂದಿಗೆ ಮಸ್ಟರಿಂಗ್ ಕೇಂದ್ರಕ್ಕೆ ಮರಳಿದ ಸಿಬ್ಬಂದಿಗಳು – https://kundapraa.com/?p=66687 .