ಸಿಇಟಿ ಫಲಿತಾಂಶ : ಕಾರ್ಕಳ ಕ್ರಿಯೇಟಿವ್‌ ಪಿ ಯು ಕಾಲೇಜು ದ್ವಿತೀಯ ವರ್ಷವೂ ಅತ್ಯುತ್ತಮ ಸಾಧನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಾರ್ಕಳ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 2023 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಜಾಗೃತಿ ಕೆ ಪಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 17 ನೇ ರ‍್ಯಾಂಕ್‌, ಪಶುವೈದ್ಯಕೀಯದಲ್ಲಿ 107ನೇ ರ‍್ಯಾಂಕ್‌, ಬಿ. ಎನ್‌ ವೈ ಎಸ್‌ ನಲ್ಲಿ 53 ನೇ ರ‍್ಯಾಂಕ್‌ ಹಾಗೂ ಇಂಜಿನಿಯರಿಂಗ್‌ ವಿಭಾಗದಲ್ಲಿ 112 ನೇ ರ‍್ಯಾಂಕ್‌ ಪಡೆದಿದ್ದಾರೆ.

Call us

Click Here

ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ ಅಭಯ್‌ ಎಸ್‌ ಎಸ್‌ 99 ನೇ ರ‍್ಯಾಂಕ್‌, ಆದಿತ್ಯ ಹೊಳ್ಳ 201 ನೇ ರ‍್ಯಾಂಕ್‌, ಪ್ರಣವ್‌ ಪಿ ಸಂಜಿ 294 ನೇ ರ‍್ಯಾಂಕ್‌, ಕಾರ್ತಿಕ್‌ ಕೃಷ್ಣಮೂರ್ತಿ ಹೆಗಡೆ 492 ನೇ ರ‍್ಯಾಂಕ್‌, ಉದ್ಭವ್‌ ಎಂ ಆರ್‌ 843 ನೇ ರ‍್ಯಾಂಕ್‌, ಸಾತ್ವಿಕ್‌ ಎಸ್‌ ಶೆಟ್ಟಿ 920 ನೇ ರ‍್ಯಾಂಕ್‌ ಗಳಿಸಿದ್ದಾರೆ.

ಬಿ.ಎಸ್ಸಿ ಅಗ್ರಿಕಲ್ಚರ್‌ ವಿಭಾಗದಲ್ಲಿ ಸಾತ್ವಿಕ್‌ ಎಸ್‌ ಶೆಟ್ಟಿ 237, ಉದ್ಭವ್‌ ಎಂ ಆರ್‌ 242, ಶ್ರೇಯಸ್‌ ಎಸ್‌ ಚಿಕಾಲೆ 333, ಸಾಕ್ಷಿತ್‌ ಶೆಟ್ಟಿ 457 ನೇ ರ‍್ಯಾಂಕ್‌ ಪಡೆದಿದ್ದಾರೆ.

ಪಶುವೈದ್ಯಕೀಯ ವಿಭಾಗದಲ್ಲಿ ಉದ್ಭವ್‌ ಎಂ ಆರ್‌ 298 ನೇ ರ‍್ಯಾಂಕ್‌ ಹಾಗೂ ಬಿ. ಎನ್‌ ವೈ ಎಸ್‌ ನಲ್ಲಿ 243 ನೇ ರ‍್ಯಾಂಕ್‌, ಪಶುವೈದ್ಯಕೀಯ ವಿಭಾಗದಲ್ಲಿ ಸಾತ್ವಿಕ್‌ ಎಸ್‌ ಶೆಟ್ಟಿ 407 ನೇ ರ‍್ಯಾಂಕ್‌ ಮತ್ತು ಬಿ. ಎನ್‌ ವೈ ಎಸ್‌ ನಲ್ಲಿ 531 ನೇ ರ‍್ಯಾಂಕ್‌ ಗಳಿಸಿದ್ದಾರೆ.

ಎಲ್ಲಾ ವಿಭಾಗಗಳನ್ನು ಸೇರಿ 1000 ದ ಒಳಗೆ 54 ವಿದ್ಯಾರ್ಥಿಗಳು, 2000 ದ ಒಳಗೆ 112 ವಿದ್ಯಾರ್ಥಿಗಳು, 5000 ದ ಒಳಗೆ 203 ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಗಳಿಸುವುದರ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶದೊಂದಿಗೆ ನೀಟ್‌ (NEET) ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Click here

Click here

Click here

Click Here

Call us

Call us

ಇದನ್ನೂ ಓದಿ: ► ನೀಟ್‌ ಫಲಿತಾಂಶ: ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿನಿ ಜಾಗೃತಿಗೆ ಆಲ್‌ ಇಂಡಿಯಾ 23ನೇ ರ್ಯಾಂಕ್ – https://kundapraa.com/?p=67110 .

ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಹೆತ್ತವರು, ಉಪನ್ಯಾಸಕ ವರ್ಗದವರು ಹಾಗೂ ಸಿಇಟಿ ಸಂಯೋಜಕರಾದ ಸುಜಯ್‌ ಬಿ.ಟಿ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ

Leave a Reply