ಕುಂದಾಪುರ ರೋಟರಿಯಿಂದ ಕಾಲೇಜು ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿಗಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳುವ ಮುಖೇನ ಸ್ವತಂತ್ರ ಯೋಚನೆ ಹಾಗೂ ಯೋಜನೆಗಳಿಗೆ ಮುಂದಾಗ ಬೇಕು. ಆಗ ಮಾತ್ರ ತಮ್ಮದೇ ಆದ ಬದುಕು ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬಹುದು ಎಂದು ರೋಟರಿ ಕ್ಲಬ್ ಕುಂದಾಪುರದ ಡಿಸ್ಟಿಕ್ ಚೇರ್ಮನ್ ಆವರ್ಸೆ ಮುತ್ತಯ್ಯ ಶೆಟ್ಟಿ ಹೇಳಿದರು.

Call us

Click Here

ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯಕ್ಕೆ ಕುಂದಾಪುರದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕಿ ಡಾ| ಪಾರ್ವತಿ ಜಿ. ಐತಾಳ್ ನೀಡಿದ ಸುಮಾರು 60 ಪುಸ್ತಕಗಳನ್ನು ಪಾಂಶುಪಾಲರಿಗೆ ಹಸ್ತಾಂತರಿಸಿ ಮಾತನಾಡಿದರು.

ಈ ಸಂದರ್ಭ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ವೆಂಕಟೇಶ್ ನಾವುಂದ, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅತಿಥಿ ನೆಲೆಯ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ಸಾಹಿತ್ಯದ ಓದು ವಿದ್ಯಾರ್ಥಿಗಳ ಬದುಕಿನಲ್ಲಿ ತಾಳ್ಮೆ, ಸಹನೆಯೊಂದಿಗೆ ಮಾನಸಿಕ ಖಿನ್ನತೆಯನ್ನು ದೂರ ಮಾಡುತ್ತದೆ ಎಂದರು. ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಕಾಲೇಜಿನ ಗ್ರಂಥಾಪಾಲಕ ಮಹೇಶ್ ನಾಯ್ಕ್ ಪ್ರಾರ್ಥಿಸಿ, ವಂದಿಸಿದರು. ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ನಿರೂಪಿಸಿದರು.

Leave a Reply