ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಭಕ್ತಿ ಸಂಗೀತ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ಸರಣಿ ಕಾರ್ಯಕ್ರಮದಡಿ ಸತತ 84ನೇ ತಿಂಗಳ ಕಾರ್ಯಕ್ರಮವು ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.

Call us

Click Here

ಕಾರ್ಯಕ್ರಮದ ಅಧ್ಯಕ್ಷ , ನಿವೃತ್ತ ಪ್ರಾಂಶುಪಾಲರಾದ ಎಮ್. ರತ್ನಾಕರ ಪೈ ರವರು ಭಜನೆಯ ಮಹತ್ವವನ್ನು ವಿವರಿಸಿದರು. ಮಹಾಮಾಯಾ ಭಜನಾ ಮಂಡಳಿ, ಈಶ್ವರ ನಗರ, ಮಣಿಪಾಲದ ಮಾಯಾ ಕಾಮತ್ ರವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ 2022-23 ನೇ ಸಾಲಿನ ಪರೀಕ್ಷೆಯಲ್ಲಿ ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ (604/625) ಪಡೆದ ಮಹಿಮಾ ಅವರನ್ನೂ ಗೌರವಿಸಲಾಯಿತು.

ವೇದಿಕೆಯಲ್ಲಿ ಸುಗುಣಾ ಶೆಟ್ಟಿ, ವಸಂತಿ ಆರ್. ಪಂಡಿತ್, ರಮ್ಯಾ ಮಲ್ಯ ಹಾಗೂ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ರವರು ಉಪಸ್ಥಿತರಿದ್ದರು. ಕೊನೆಯಲ್ಲಿ ಮಹಾಮಾಯಾ ಭಜನಾ ಮಂಡಳಿ, ಮಣಿಪಾಲದ ಸದಸ್ಯರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು. ನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ್ ಶ್ಯಾನುಭಾಗ್ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply