ಪಟ್ಟಾಭಿ ರಾಮಚಂದ್ರ ದೇವಳದಲ್ಲಿ ವಿವಿಧ ಅಲಂಕಾರಗಳೊಂದಿಗೆ ಪೂಜಿತ ವೇದವ್ಯಾಸ ದೇವರು

Call us

Call us

Call us

ಕುಂದಾಪುರ: ಇಲ್ಲಿನ ಕೋಟೇಶ್ವರದ ಗೌಡ ಸಾರಸ್ವತ ಬ್ರಾಹ್ಮಣರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಚಾತುರ್ಮಾಸ ವೃತ ಆಚರಿಸುತ್ತಿರುವ ಶ್ರೀ ಕಾಶೀ ಮಠಾಧೀಶ ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮಿಗಳಿಂದ ನವರಾತ್ರಿಯ ಪರ್ವಕಾಲದಲ್ಲಿ  ಶ್ರೀ ವೇದವ್ಯಾಸ ದೇವರು (ವೇದವ್ಯಾಸ ರಘುಪತಿ ದೇವರು) ಪ್ರತಿದಿನ ವಿವಿಧ ಅಲಂಕಾರಗಳೊಂದಿಗೆ ಪೂಜಿಸಲ್ಪಟ್ಟಿತು.

Call us

Click Here

ನವರಾತ್ರಿ ಹಾಗೂ ಸ್ವಾಮಿಗಳ ಚಾತರ್ಮಾಸದ ಪ್ರಯುಕ್ತ ದೇವಳದಲ್ಲಿ ಪ್ರತಿನಿತ್ಯವೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಲಿದೆ. ಚಿತ್ರದಲ್ಲಿ ಐರಾವತ ವಾಹನ ಆರೂಢ, ಶೇಷ ವಾಹನ ಆರೂಢ, ಬೆಳ್ಳಿ ಗರುಡ ವಾಹನ ಆರೂಢ, ತೊಟ್ಟಿಲು ವಾಹನ ಆರೂಢ ಶ್ರೀ ವೇದವ್ಯಾಸ ದೇವರನ್ನು ಕಾಣಬಹುದು.

Koteshwara Pattabiramachandra temple silver garuda vaahana Koteshwara Pattabiramachandra temple silver Iravatha vaahana Koteshwara Pattabiramachandra temple silver Shesha vaahana Koteshwara Pattabiramachandra temple silver tottilu vaahana

Leave a Reply