ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಸಭೆಯಲ್ಲಿ ಸಚಿವರ ಮಾತು
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜು.24: ಹಿಂದಿನ ಸರಕಾರ ಮೀನುಗಾರರಿಗೆ ನೀಡಿದ ಎಲ್ಲಾ ಭರವಸೆಗಳು ಇಂದಿಗೂ ಭರವಸೆಯಾಗಿಯೇ ಉಳಿದಿದೆ. ಕಾಂಗ್ರೆಸ್ ಸರಕಾರ ಯಾವುದೇ ಸುಳ್ಳು ಭರವಸೆ ನೀಡುವುದಿಲ್ಲ. ಆದರೆ ಏನು ಮಾಡುತ್ತೆವೆಯೂ ಅದನ್ನೇ ಗ್ಯಾರೆಂಟಿಯಾಗಿ ಹೇಳುತ್ತೆವೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜನಸಾರಿಗೆ ಸಚಿವ ಮಾಂಕಾಳ ಎಸ್. ವೈದ್ಯ ಹೇಳಿದರು.

ಅವರು ಸೋಮವಾರ ಉಪ್ಪುಂದದ ರಾಣಿಬಲೆ ಮೀನುಗಾರರ ಒಕ್ಕೂಟ ರಿ. ವತಿಯಿಂದ ಕೊಡೇರಿ ಕಿರುಬಂದರುವಿನಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಹಿಂದಿನ ಸರಕಾರದಿಂದ ಮೀನುಗಾರರಿಗೆ ಕೆಟ್ಟ ಪರಿಸ್ಥಿತಿ ಬಂದಿತ್ತು. ನಾವು ಸುಳ್ಳು ಹೇಳುವುದಿಲ್ಲ ಮೀನುಗಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಡಲಾಗುವುದು ಎಂದರು.
ಮೀನುಗಾರರಿಗೆ 4 ವರ್ಷದಿಂದ ಸಂಕಷ್ಟ ನಿಧಿ ಪರಿಹಾರ ಸಿಗಲಿಲ್ಲ, ಇಂಜಿನ್ ಸಬ್ಸಿಡಿಗೆ ಒಂದು ರೂಪಾಯಿನು ನೀಡಲಿಲ್ಲ. 3.60 ಕೋಟಿ ಲಕ್ಷ ಪರಿಹಾರ ಹಣವನ್ನು ಬಿಡುಗಡೆ ಮಾಡದೇ ಅನ್ಯಾಯವೆಸಗಿಗಿದೆ. ಇದೆಲ್ಲದಕ್ಕೂ ಒದಗಿಸುವ ಕ್ರಮ ಕೈಗೊಳ್ಳುವ ಜೊತೆಗೆ ಕೊಡೇರಿ ಬಂದರಿಗೆ 1ವರ್ಷದೊಳಗೆ 3ನೇ ಹಂತದ ಕಾಮಗಾರಿ ಹಾಗೂ ಬಂದರು ರಸ್ತೆಗೆ ಅನುದಾನ ನೀಡಲಾಗುವುದು. ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಮನವಿ ಮೇರೆಗೆ 100 ಮೀನುಗಾರಿಕಾ ಮನೆಗಳನ್ನು ನೀಡಲಾಗುವುದು ಎಂದರು.ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅಧ್ಯಕ್ಷತೆ ವಹಿಸಿ, ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದರು. ಈ ವೇಳೆ ಸಚಿವ ಮಾಂಕಾಳ ಎಸ್ ವೈದ್ಯ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಮೀನುಗಾರಿಕೆ ನಿರ್ದೇಶನಾಲಯ ನಿರ್ದೇಶಕ ಗಣೇಶ ಕೆ., ಮೀನುಗಾರಿಕಾ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸಮೂರ್ತಿ, ಉಡುಪಿ ಅಪರ ನಿರ್ದೇಶಕ ವಿವೇಕ ಆರ್, ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗ್ಡೆ, ಬೈಂದೂರು ವಲಯದ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಗೌರವ ಸಲಹೆಗಾರ ಎಸ್. ಮದನ ಕುಮಾರ್, ಜಿಪಂ ಮಾಜಿ ಸದಸ್ಯ ಎಸ್. ರಾಜು ಪೂಜಾರಿ ಉಪಸ್ಥಿತರಿದ್ದರು.
ಒಕ್ಕೂಟದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಕೋಶಾಧಿಕಾರಿ ಬಿ. ನಾಗೇಶ ಖಾರ್ವಿ, ಜೊತೆ ಕಾರ್ಯದರ್ಶಿ ಸೋಮಶೇಖರ ಖಾರ್ವಿ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಎ. ಶ್ರೀನಿವಾಸ ಖಾರ್ವಿ, ಎಸ್. ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ಶಂಕರ ಖಾರ್ವಿ, ನವೀನ್ ಖಾರ್ವಿ, ಶರತ್ ಖಾರ್ವಿ ಇದ್ದರು.
ಪ್ರಧಾನ ಕಾರ್ಯದರ್ಶಿ ಸುರೇಶ ಖಾರ್ವಿ ಸ್ವಾಗತಸಿ, ಸುಬ್ರಹ್ಮಣ್ಯ ವಂದಿಸಿದರು. ಸದಸ್ಯ ರವೀಂದ್ರ ಕೆ. ನಿರೂಪಿಸಿದರು.
ಮೀನುಗಾರಿಕಾ ಬಂದರು ಭೇಟಿ:
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜನಸಾರಿಗೆ ಸಚಿವ ಮಾಂಕಾಳ ಎಸ್. ವೈದ್ಯ ಅವರು ಕೊಡೇರಿ ಕಿರುಬಂದರಿಗೆ ಭೇಟಿ ನೀಡಿ ಪ್ರಸ್ತುತ ಸ್ಥಿತಿಗತಿಗಳ ಮಾಹಿತಿ ಪಡೆದುಕೊಂಡರು. ಈ ವೇಳೆ ಮೀನುಗಾರಿಕೆ ನಿರ್ದೇಶನಾಲಯ ನಿರ್ದೇಶಕ ಗಣೇಶ ಕೆ., ಮೀನುಗಾರಿಕಾ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸಮೂರ್ತಿ, ಉಡುಪಿ ಅಪರ ನಿರ್ದೇಶಕ ವಿವೇಕ ಆರ್, ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗ್ಡೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಮುಖಂಡರುಗಳಾದ ಮದನ್ ಕುಮಾರ್ ಉಪ್ಪುಂದ, ಆನಂದ ಖಾರ್ವಿ, ಜಿಪಂ ಮಾಜಿ ಸದಸ್ಯ ಎಸ್. ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.