ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಾಸಿ ಮರವಂತೆ ಬೀಚ್ ವೀಕ್ಷಣೆಗೆ ಸಂದರ್ಭ ಪ್ರವಾಸಿಯೊಬ್ಬರು ಸಮುದ್ರ ಬಿದ್ದು ಮೃತಪಟ್ಟ ಹಿನ್ನೆಯಲ್ಲಿ ಸೋಮವಾರ ಎಚ್ಚರಿಕೆ ನಾಮಫಲಕ ಹಾಗೂ ಕೆಂಪು ರಿಬ್ಬನ್ ಟೇಪ್ ಕಟ್ಟುವ ಮೂಲಕ ಜಾಗೃತಿ ಕಾರ್ಯ ಕೈಗೊಳ್ಳಲಾಗಿದೆ.

ಬೀಚ್ ತೀರದಲ್ಲಿ ಅಲ್ಲಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದರೂ ಪ್ರವಾಸಿಗರ ಹುಚ್ಚಾಟ ಎಲ್ಲೆ ಮೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಗಂಗೋಳ್ಳಿ ಠಾಣಾಧಿಕಾರಿ ಹರೀಶ್ ನಾಯ್ಕ್ ಸ್ಥಳೀಯರ ಸಹಕಾರದಲ್ಲಿ ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ರಿಬ್ಬನ್ ಹಾಗೂ ಸೂಚನಾ ಫಲಕ ಅಳವಡಿಸಿದ್ದಾರೆ.
ಸಿಬ್ಬಂದಿ ಅಗತ್ಯ:
ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ಪ್ರವಾಸಿಗರು ನಿರಂತರವಾಗಿ ಮರವಂತೆ ಬೀಚಿಗೆ ಭೇಟಿ ನೀಡುವುದರಿಂದ ಅಲ್ಲಿ ಪೊಲೀಸ್ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆ ಖಾಯಂ ಸಿಬ್ಬಂದಿಗಳನ್ನು ಇರಿಸಿ ಎಚ್ಚಿರಿಕೆ ನೀಡಬೇಕಾದ ಅನಿವಾರ್ಯತೆ ಇದೆ. ನಾಪಫಲಕಗಳು ಹಾಗೂ ರಿಬ್ಬರ್ ತಾತ್ಕಾಲಿಕವಾಗಿ ಅಷ್ಟೇ ಉಳಿಯುವುದರಿಂದ ಪ್ರವಾಸಿಗರನ್ನು ಸಿಬ್ಬಂದಿಗಳ ಮೂಲಕವೇ ಎಚ್ಚರಿಸುವುದು ಅನಿವಾರ್ಯವಾಗಿದೆ.