ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದಲ್ಲಿ ನಮ್ಮ ನಡುವೆ ಅಶಾಂತಿಯನ್ನುಂಟುಮಾಡುವ ಪ್ರಕ್ರಿಯೆಗಳು ಇಂದು ನಿರಂತರವಾಗಿ ನಡೆಯುತ್ತಿದೆ. ಮಣಿಪುರದಲ್ಲಿ ನಡೆದ ಘಟನೆ ದೇಶವೇ ತಲೆ ತಗ್ಗಿಸುವಂತಾಹದ್ದು. ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯದ ಮಾಹಿತಿ ಮೊದಲೇ ಇದ್ದರೂ ಸ್ಥಳೀಯ ಪೊಲೀಸ್, ಸರ್ಕಾರ ಕ್ರಮ ಕೈಗೊಳ್ಳಲು ಹಿಂದೆಟು ಹಾಕಿರುವುದು ಹಾಗೂ ಕೇಂದ್ರ ಸರ್ಕಾರ ಮೌನ ವಹಿಸಿದ್ದುದರ ಹಿಂದಿನ ಉದ್ದೇಶವೇನು ಎಂದು ಪ್ರಗತಿಪರ ಚಿಂತಕ ಶಶಿಧರ ಹೆಮ್ಮಾಡಿ ಪ್ರಶ್ನಿಸಿದರು.
ಅವರು ಸೋಮವಾರ ಕುಂದಾಪುರದ ಸಹಬಾಳ್ವೆ ಕುಂದಾಪುರ, ದಸಂಸ ತಾಲೂಕು ಘಟಕ ಕುಂದಾಪುರ, ಸಮುದಾಯ ಕುಂದಾಪುರ ಹಾಗೂ ಇನ್ನಿತರ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹಿಳೆಯರನ್ನು ದೇವರು ಎನ್ನುವ ಬಿಜೆಪಿ ನೇತೃತ್ವದ ಸರ್ಕಾರ, ಪರಿವಾರ ಈ ಘಟನೆಯ ಬಗ್ಗೆ ಕಠಿಣ ನಿಲುವುಗಳನ್ನು ತಳೆಯದಿರುವುದರ ಹಿಂದೆ ಆನೇಕ ಕಾರಣಗಳು ಇವೆ. ಮಣಿಪುರ ಘರ್ಷಣೆಯಲ್ಲಿ 5ಸಾವಿರಕ್ಕೂ ಹೆಚ್ಚು ಮನೆಗಳನ್ನು ಸುಟ್ಟು ಹಾಕಿದರು. 25ಕ್ಕೂ ಹೆಚ್ಚು ಚರ್ಚ್ಗಳಿಗೆ ಹಾನಿಯಾಗಿದೆ. ಮಣಿಪುರದ ಬುಡಕಟ್ಟು ಜನಾಂಗವೊಂದರ ಮೇಲೆ ಕೌರ್ಯ ನಡೆದಿದೆ. ಸರ್ಕಾರಗಳ ವೈಫಲ್ಯವಿರುವುದು ಎದ್ದು ಕಾಣುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ವಕೀಲ ವಿಕಾಸ್ ಹೆಗ್ಡೆ, ಜುಡಿತ್ ಮೆಂಡೊನ್ಸಾ, ಸಹಬಾಳ್ವೆ ಸಂಚಾಲಕ ರಫಿಕ್, ದಲಿತ ಸಂಘರ್ಷ ತಾಲೂಕು ಸಮಿತಿ ಅಧ್ಯಕ್ಷರಾದ ಮಂಜುನಾಥ ಗಿಳಿಯಾರ್, ವಲಯ ಧರ್ಮಗುರುಗಳಾದ ಸ್ಟ್ಯಾನಿ ತಾವ್ರೊ, ಕಥೊಲಿಕ್ ಸಭಾ ವಲಯ ಅಧ್ಯಕ್ಷ ವಿಲ್ಸನ್ ಅಲ್ಮೇಡಾ, ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಬ್ಬು ಅಹ್ಮದ್, ಅಶ್ಬಕ್, ಸಮುದಾಯ ಅಧ್ಯಕ್ಷರಾದ ಸದಾನಂದ ಬೈಂದೂರು, ಸದಸ್ಯರಾದ ಉದಯ್ ಗಾಂವ್ಕರ್, ವಾಸುದೇವ ಗಂಗೇರ್, ಬಾಲಕೃಷ್ಣ, ಸಿಪಿಯಂನ ಅಧ್ಯಕ್ಷರಾದ ಹೆಚ್ ನರಸಿಂಹ ಹಾಗೂ ಸ್ಥಳೀಯರಾದ ಚಂದ್ರ ಅಮೀನ್, ಆಶಾ ಕರ್ವಾಲ್ಲೊ,ಕೇಶವ್ ಭಟ್, ರೋಶನ್ ಶೆಟ್ಟಿ, ರೇವತಿ ಶೆಟ್ಟಿ, ಗಂಗಾಧರ್ ಶೆಟ್ಟಿ, ಅಭಿಜಿತ್ ಪೂಜಾರಿ, ಗಣೇಶ್ ಶೇರೆಗಾರ್, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ಕುಮಾರ್ ಖಾರ್ವಿ, ಜ್ಯೋತಿ, ಹಾರೋನ್ ಸಾಹೇಬ್, ಅಶೋಕ್ ಸುವರ್ಣ, ರೋಶನ್ ಬರೆಟ್ಟೊ, ಮುನಾಫ್, ಶಾಲೆಟ್ ರೆಬೆಲ್ಲೊ, ಯಾಸಿನ್ ಹೆಮ್ಮಾಡಿ, ಶಾಂತಿ ಪಿರೇರಾ, ಅಬ್ದುಲ್ಲಾ ಕೋಡಿ, ಶಿವಕುಮಾರ್ ಮೊಲದಲಾದವರು ಉಪಸ್ಥಿತರಿದ್ದರು.