ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಸಂಸ್ಕಾರ, ಸಂಸ್ಕೃತಿ ಪಸರಿಸುವ ವಿಶಿಷ್ಟ ಕಲೆ ಯಕ್ಷಗಾನ, ಸರಿ ತಪ್ಪುಗಳ ತರ್ಕಿಸುವ ಶಕ್ತಿ, ಪದಭಂಡಾರ ನಮಗೆ ಶಾಲಾ ಪಠ್ಯದಿಂದ ದೊರೆತದ್ದಲ್ಲ. ಅದೆಲ್ಲವೂ ಯಕ್ಷಗಾನದಿಂದಲೇ ಪಡೆದದ್ದು ಎಂದು ಹಿರಿಯ ಅರ್ಥವಾದಿ ಜಬ್ಬಾರ್ ಸಮೋ ಹೇಳಿದರು.
ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪೂರ್ಣರಾತ್ರಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಯಕ್ಷ ಸಂಕ್ರಾಂತಿ ವತಿಯಿಂದ ‘ಗುರು ಸಮ್ಮಾನ ಸ್ವೀಕರಿಸಿ ಅವರು ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುಗಾಜ ಗಂಟಿಹೊಳೆ ಅವರನ್ನು ಸನ್ಮಾನಿಸಲಾಯಿತು. ರಂಗಕರ್ಮಿ ಸೇತುರಾಂ ಎಸ್ಎನ್, ಜಬ್ಬಾರ್ ಸಮೋ, ಟಿ. ಶಿವಾನಂದ ಶೆಟ್ಟಿ, ದೀಪಕ್ ಶೆಟ್ಟಿ ಬಾರ್ಕೂರು, ಗೋವಿಂದ ಬಾಬು ಪೂಜಾರಿ, ರಘುರಾಮ ಶೆಟ್ಟಿ ಎಳ್ಮುಡಿ, ಪ್ರವೀಣ್ ಕುಮಾರ್ ಶೆಟ್ಟಿ, ಅಶ್ವಥ್ ಹೆಗ್ಡೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ‘ಕೃಷ್ಣ ಸಂಧಾನ’ ಹಾಗೂ ಕರ್ಣಾರ್ಜುನ ಎಂಬ ಅಖ್ಯಾನಗಳ ಯಕ್ಷಗಾನ ತಾಳಮದ್ದಳೆ ಜರುಗಿತು. ತಾಳಮದ್ದಳೆಗಾಗಿ ಬೆಂಗಳೂರಿನಲ್ಲಿ ಸಭಾಂಗಣ ತುಂಬಿದ್ದು ವಿಶೇಷವಾಗಿತ್ತು.
ಸಂಘಟಕ ನಾಗರಾಜ್ ಶೆಟ್ಟಿ ನೈಕಂಬ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ ನಂದ್ರೊಳ್ಳಿ ವಂದಿಸಿ, ಸುನಿಲ್ ಹೊಲಾಡು ನಿರೂಪಿಸಿದರು.