ಬಿರುಗಾಳಿ ಸಹಿತ ಮಳೆಗೆ ಉಳ್ಳೂರು 74 ಗ್ರಾಮದ ಮನೆ ತೋಟಗಳಿಗೆ ಅಪಾರ ಹಾನಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬಿರುಗಾಳಿ ಸಹಿತ ಬುಧವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಉಳ್ಳೂರು 74 ಗ್ರಾಮದಲ್ಲಿ ಮನೆ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ. ಬಿರುಗಾಳಿಯಿಂದಾಗಿ ಏಳು ಮನೆಗಳಿಗೆ ಹಾನಿ ಉಂಟಾಗಿದ್ದು, ಒಂದೂವರೆ ಸಾವಿರಕ್ಕೂ ಅಧಿಕ ಅಡಕೆ ಹಾಗೂ ತೆಂಗಿನ ಮರಗಳು ಧರೆಗುರುಳಿದೆ.

Call us

Click Here

ಉಳ್ಳೂರು 74 ಗ್ರಾಮದ ಜಯಕರ ಶೆಟ್ಟಿ ಮನೆಗೆ ಹಾನಿಯಾಗಿದ್ದು 2 ಲಕ್ಷ ನಷ್ಟವಾಗಿದೆ. ಪಾರ್ವತಿ ಶೆಡ್ತಿ ಮನೆಗೆ ಹಾನಿಯಾಗಿದ್ದು, 25 ಸಾವಿರ, ಸುಮತಿ ಶೆಡ್ತಿ 50 ಸಾವಿರ, ರತ್ನಾಕರ ಶೆಟ್ಟಿ ಮನೆಗೆ ಹಾನಿಯಾಗಿದ್ದು 20 ನಷ್ಟ ಉಂಟಾಗಿದೆ.

ಕೃಷಿ ತೋಟದಲ್ಲಿನ ಫಸಲು ಭರಿತ ಅಡಕೆ- ತೆಂಗು ಮರಗಳು ನೆಲಕಚ್ಚಿದ್ದು, ಅಪಾರ ನಷ್ಟ ಸಂಭವಿಸಿದೆ. ಸುಧಾಕರ ಶೆಟ್ಟಿ ಅವರ 225 ಅಡಿಕೆ ಮರ, ಶಂಕರ ಶೆಟ್ಟಿ 150, ಮಹಾಬಲ ನಾಯ್ಕರ 40, ಉದಯ ಪೂಜಾರಿ ತೋಟದ 15 ಮರ, ವನಜ ಆಚಾರ್ತಿಯವರ 35, ರತ್ನ ಆಚಾರಿ 75, ಲಕ್ಷ್ಮೀನಾರಾಯಣ ಆಚಾರಿ 25, ಕೃಷ್ಣ ಆಚಾರಿ 20, ಪಾರ್ವತಿ ಶೆಟ್ಟಿ 25, ಸಂಪಿಗೇಡಿ ನಾರಾಯಣ ಶೆಟ್ಟಿ 125 ಅಡಿಕೆ ಹಾಗೂ 4 ತೆಂಗಿನ ಮರ, ಸುಮತಿ ಶೆಡ್ತಿ 200 ಅಡಕೆ ಮರ, ರತ್ನಾಕರ ಶೆಟ್ಟಿ200 ಅಡಕೆ, ದಿವಾಕರ ಶೆಟ್ಟಿ 220 ಮರ ಹಾಗೂ ಕಲಾವತಿ ಶೆಟ್ಟಿ 250 ಅಡಕೆ ಮರಗಳು ಗಾಳಿಗೆ ಮುರಿದು ಬಿದ್ದಿವೆ. 1600ಕ್ಕೂ ಅಧಿಕ ಅಡಕೆ ಮರ ಹಾಗೂ ನಾಲ್ಕು ತೆಂಗಿನ ಮರಗಳು ಧರೆಗುರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮಿ, ಕಂದಾಯ ನಿರೀಕ್ಷಕ ರಾಘವೇಂದ್ರ ಡಿ., ಉಳ್ಳೂರು ಗ್ರಾಮ ಕರಣಿಕ ಕಿರಣ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಪಿಡಿಒ ಶ್ರೀಧರ್ ಕಾಮತ್ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಸಂಜೀವ ಶೆಟ್ಟಿ ಸಂಪಿಗೇಡಿ, ರೋಹಿತ್ ಶೆಟ್ಟಿ, ದೀಪಕ್‌ ಕುಮಾರ್ ಶೆಟ್ಟಿ ಮೊದಲಾದವರು ಭೇಟಿ ನೀಡಿದರು.

Leave a Reply