ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ: ಎಸ್.ವಿ ಗಂಗೊಳ್ಳಿ ವಿನ್ನರ್ ಕೆಪಿಎಸ್ ಕೋಟೇಶ್ವರಕ್ಕೆ ರನ್ನರ್ ಅಪ್ ಪ್ರಶಸ್ತಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ಕೆಪಿಎಸ್ ಪ್ರೌಢಶಾಲೆ ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ಶಾಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

Call us

Click Here

ಪಂದ್ಯಾಟವನ್ನು ಸ್ಥಳೀಯ ಉದ್ಯಮಿ ಪ್ರಭಾಕರ್ ಕುಂಭಾಶಿ ಉದ್ಘಾಟಿಸಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಪ್ರಾಮುಖ್ಯತೆ ಕೇವಲ ಒಬ್ಬರ ಫಿಟ್ನೆಸ್ಗೆ ಸೀಮಿತವಾಗಿಲ್ಲ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆ ಯಶಸ್ವಿ ಜೀವನಕ್ಕೆ ಆಧಾರವಾಗಿದೆ ಎಂದರು ಸಂಸ್ಥೆಯ ಉಪಪ್ರಾಂಶುಪಾಲರದ ಚಂದ್ರಶೇಖರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಯು ಸ್ಥಿತಿಸ್ಥಾಪಕತ್ವ, ಪರಿಶ್ರಮ ಮತ್ತು ಸಹಬಾಳ್ವೆ ಮನೋಭಾವದ ಗುಣಗಳನ್ನು ಅಭಿವೃದ್ಧಿಪಡಿಸುವ ಅದ್ಭುತ ಮಾರ್ಗವಾಗಿದೆ ಎಂದರು.

ಸಭೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರ್ವೀಕ್ಷಣಾಧಿಕಾರಿ ರವೀಂದ್ರ ನಾಯಕ್ ಯುವಜನ ಮತ್ತು ಸಬಲೀಕರಣ ಇಲಾಖೆಯ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಸಂಸ್ಥೆಯ ಪ್ರಾಂಶುಪಾಲೆ ಸುಶೀಲಾ ಹೊಳ್ಳ ಉಪಸ್ಥಿತರಿದ್ದರು

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಂಕರ್ ನಾಯ್ಕ್ ಲೆಕ್ಕಪರಿಶೋಧಕರು ಕೋಟೇಶ್ವರ ಇವರು ಬಹುಮಾನಗಳನ್ನು ವಿತರಿಸಿ ಕ್ರೀಡೆಯು ಪ್ರತಿಭೆಯನ್ನು ಗುರುತಿಸುವುದರೊಂದಿಗೆ ಮಕ್ಕಳು ಉತ್ತಮ ಜೀವನ ಕೌಶಲ್ಯಗಳನ್ನು ಕಲಿಯಲು ಸಹಾಯಕವಾಗಿದೆ ಎಂದು ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಕ್ರೀಡಾಳುಗಳಿಗೆ ಶುಭ ಹಾರೈಸಿದ.ರು

ಪಂದ್ಯಾಟದ ಸಂಘಟನೆಯ ಪ್ರಾಯೋಜಕತ್ವವನ್ನು ಕೋಟೇಶ್ವರ ಸ್ಪೋರ್ಟ್ಸ್ ಕ್ಲಬ್ ನ ಸುಭಾಷ್ ಶೆಟ್ಟಿ ಹಾಗೂ ಶಂಕರ್ ನಾಯ್ಕ್ ವಹಿಸಿದ್ದರು ಸಭೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ನಾರಾಯಣ ಶೆಟ್ಟಿ, ವರದಿಗಾರ ರಾಘವೇಂದ್ರ ಪೈ ಗಂಗೊಳ್ಳಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಹಾಗೂ ಉದಯ ಮಡಿವಾಳ ಎಂ ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು ಸಹ ಶಿಕ್ಷಕ ರಮಾನಂದ್ ನಾಯಕ್ ವಂದಿಸಿದರು

Click here

Click here

Click here

Click Here

Call us

Call us

ಫಲಿತಾಂಶ :
ಪ್ರಾಥಮಿಕ ಶಾಲಾ ಬಾಲಕರ ವಿಭಾಗ
ಪ್ರಥಮ ಎಸ್ ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಂಗೊಳ್ಳಿ
ದ್ವಿತೀಯ ಸೈಂಟ್ ಪಿಯೂಷ್ ಆಂಗ್ಲ ಮಾಧ್ಯಮ ಶಾಲೆ ಹಂಗ್ಲೂರು
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ
ಪ್ರಥಮ ಎಸ್ ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಂಗೊಳ್ಳಿ
ದ್ವಿತೀಯ ಝೀಯಾ ಪಬ್ಲಿಕ್ ಸ್ಕೂಲ್ ಕಂಡ್ಲೂರು
17ರ ವಯೋಮಾನದ ಬಾಲಕರ ವಿಭಾಗ
ಪ್ರಥಮ ಎಸ್ ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಂಗೊಳ್ಳಿ
ದ್ವಿತೀಯ ಕೆಪಿಎಸ್ ಪ್ರೌಢಶಾಲೆ ಕೋಟೇಶ್ವರ
17ರ ವಯೋಮಾನದ ಬಾಲಕಿಯರ ವಿಭಾಗ
ಪ್ರಥಮ ಎಸ್ ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಂಗೊಳ್ಳಿ
ದ್ವಿತೀಯ ಸೈಂಟ್ ಪಿಯೂಷ್ ಹಂಗ್ಲೂರು
14ರ ವಯೋಮಾನದ ಬಾಲಕರ ವಿಭಾಗದ ಆಯ್ಕೆಯಲ್ಲಿ ಎಸ್ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕೌಶಿಕ್
14ರ ವಯೋಮಾನದ ಬಾಲಕಿಯರ ವಿಭಾಗದ ಆಯ್ಕೆಯಲ್ಲಿ ಕೆಪಿಎಸ್ ಪ್ರೌಢಶಾಲೆ ಕೋಟೇಶ್ವರದ ಆಶ್ರಿತಾ

Leave a Reply