ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು,ಅ.07: ಕನ್ನಡದ ಖ್ಯಾತ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಜಯ್ ಪತ್ನಿ ಸ್ಪಂದನಾ ಅವರು ಇತ್ತೀಚಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ಹೃದಯಾಘಾತವಾಗಿದೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ವಿಜಯ್ ಪತ್ನಿ ಸ್ಪಂದನ ವಿಧಿವಶರಾಗಿದ್ದಾರೆ. ನಾಳೆ ಬೆಂಗಳೂರಿಗೆ ವಿಜಯ್ ಪತ್ನಿ ಪಾರ್ಥಿವ ಶರೀರ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನ ಕಾರ್ಯವೆಲ್ಲ ಬೆಂಗಳೂರಿನಲ್ಲಿ ಜರುಗಲಿದೆ.
ನಿವೃತ್ತ ಎಸಿಪಿ ಬಿ.ಕೆ ಶಿವರಾಮ್ ಅವರ ಪುತ್ರಿ ಸ್ಪಂದನ ಅವರು ವಿಜಯ್ ಹಲವು ವರ್ಷಗಳಿಂದ ಪ್ರೀತಿಸಿ, 2007ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿಗೆ ಒಬ್ಬ ಮಗನಿದ್ದಾನೆ. ಪಾರ್ವತಮ್ಮ ರಾಜಕುಮಾರ್ ಅವರ ತಮ್ಮ ಚಿನ್ನೆಗೌಡರ ಮಗನಾದ ವಿಜಯ್ ಕುಟುಂಬ ಅಪ್ಪು ನಿಧನದ ಶಾಕ್ನಿಂದ ಹೊರಬರುವ ಹೊತ್ತಿಗೆ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.












