ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ, ಎನ್‌ಸಿಸಿ ಆರ್ಮಿ ಕೆಡೆಟ್ ಭರತ್ ಬಾಬು ದೇವಾಡಿಗ ಅವರು ಅಖಿತ ಭಾರತ ಮಟ್ಟದ 54ನೇ ಎನ್.ಸಿ.ಸಿ ವಿಶೇಷ ಪ್ರವೇಶ [NCC Special Entry] ಪರೀಕ್ಷೆಯಲ್ಲಿ 15ನೇ ರ್ಯಾಂಕ್ ಗಳಿಸಿದ್ದಾರೆ.
ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ 50 ವಿದ್ಯಾರ್ಥಿಗಳು ಮಾತ್ರವೇ ಅರ್ಹತೆ ಪಡೆದಿದ್ದು ಈ ಪೈಕಿ ಭರತ್ ದೇವಾಡಿಗ ಕೂಡ ಓರ್ವರಾಗಿದ್ದಾರೆ. ಇವರನ್ನು ಕೇಂದ್ರದ ಸಿಬ್ಬಂದಿ ಆಯ್ಕೆ ಮಂಡಳಿ [ಎಸ್.ಎಸ್.ಬಿ] – 21 ಭೂಪಾಲ್ ಬೋರ್ಡ್‌ನಿಂದ ಶಿಫಾರಸು ಮಾಡಲಾಗಿದೆ. ಭರತ್ ತರಬೇತಿಯ ಬಳಿಕ ಲೆಫ್ಟಿನೆಂಟ್ ರ್ಯಾಂಕ್ ಹುದ್ದೆ ಪಡೆಯಲಿದ್ದಾರೆ.
ಭರತ್ ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಿ .ಶುಭಕರಾಚಾರಿ, ಎನ್.ಸಿ.ಸಿ ಸೇನಾ ಅಧಿಕಾರಿ ಕ್ಯಾ. ಅಂಜನ್ ಕುಮಾರ್ ಎ. ಎಲ್, ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನಂದಿಸಿದ್ದಾರೆ.