ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಶಂಕರನಾರಾಯಣದ ಯುವಕನ ಸಾವು, ವೈದ್ಯರ ನಿರ್ಲಕ್ಷ ಆರೋಪ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜ್ವರಕ್ಕಾಗಿ ನೀಡಲಾದ ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರು ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ. ಹೊಸಂಗಡಿ ಬೆದ್ರಳ್ಳಿ ನಿವಾಸಿ ದಿ. ಚಂದ್ರ ಶೆಟ್ಟಿ ಎಂಬುವವರ ಪುತ್ರ ಅಮರ್ ಶೆಟ್ಟಿ [31 ವರ್ಷ] ಮೃತ ದುರ್ದೈವಿ.

Call us

Click Here

ದುಬೈನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಅಮರ್ ಶೆಟ್ಟಿ ಒಂದು ವರ್ಷದ ಹಿಂದಷ್ಟೇ ಊರಿಗೆ ಹಿಂದಿರುಗಿ ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಆ.13ರಂದು ಕೆ.ಪಿ. ಅಗ್ರಹಾರದ ಸಂಬಂಧಿಯ ಮನೆಗೆ ತೆರಳಿದ್ದಾಗ ಮೈಬಿಸಿ ಇರುವುದನ್ನು ಗಮನಿಸಿ ಅಲ್ಲಿಯೇ ಸಮೀಪವಿದ್ದ ಖಾಸಗಿ ಕ್ಲಿನಿಕ್‌ಗೆ ತೆರಳಿದ್ದು ವೈದ್ಯರು ಪರೀಕ್ಷಿಸಿ ಜ್ವರವೆಂದು ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ನೀಡಿದ್ದರು.

ಆದರೆ ಇಂಜೆಕ್ಷನ್ ನೀಡಿದ ಸೋಟದ ಭಾಗ ಇದ್ದಕ್ಕಿದ್ದಂತೆ ಊದಿಕೊಂಡಿದ್ದು, ಜೊತೆಗೆ ನೋವು ಕೂಡ ಕಾಣಿಸಿಕೊಂಡಿದೆ. ಹಾಗಾಗಿ ಆ.15ರಂದು ರಾಜಾಜಿನಗರದ ರೂಮಿಗೆ ಸಮೀಪದ ಖಾಸಗಿ ಕ್ಲಿನಿಕ್‌ಗೆ ತೆರಳಿದ್ದು, ವೈದ್ಯರು ಪರೀಕ್ಷಿಸಿ ಮಾತ್ರೆ ಹಾಗೂ ಗ್ಲೂಕೋಸ್‌ ನೀಡಿದ್ದರು. ಒಂದು ದಿನದ ಬಳಿಕ ನೋವು ಕಡಿಮೆಯಾಗದಿದ್ದರೆ ಚಿಕಿತ್ಸೆ ನೀಡುವುದಾಗಿ ಹೇಳಿ ಕಳುಹಿಸಿದ್ದರು. ಆದಾಗ್ಯೂ ನೋವು ಕಡಿಮೆಯಾಗದೇ ಇದ್ದುದರಿಂದ ಆ.16ರಂದು ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದಾಗ ವೈದ್ಯರು ಇಂಜೆಕ್ಷನ್ ಅಡ್ಡ ಪರಿಣಾಮದಿಂದಿಂದ ಮಲ್ಟಿ ಆರ್ಗನ್ ಡಿಸ್ ಫಂಕ್ಷನ್ ಆಗಿದೆ ಎಂದು ವೈದ್ಯರು ಕುಟುಂಬಿಕರಿಗೆ ತಿಳಿಸಿದ್ದಾರೆ. ಅ.18ರ ಸಂಜೆ ಅಮರ್ ಶೆಟ್ಟಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಕುಟುಂಬಿಕರು ಪೊಲೀಸರಿಗೆ ದೂರು ನೀಡಿದ್ದು, ನ್ಯಾಯ ದೊರಕಿಸಿಕೊಂಡಿವಂತೆ ಕೋರಿದ್ದಾರೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಊರಿಗೆ ತರಲಾಗುತ್ತಿದ್ದು, ತಾಯಿ ಮನೆಯಾದ ಶಂಕರನಾರಾಯಣದ ಹದ್ದೂರಿನಲ್ಲಿ ಅಂತ್ರಿಕ್ರಿಯೆ ನಡೆಸಲಾಗುತ್ತದೆ. ಮೃತರು ತಾಯಿ ಹಾಗೂ ಇಬ್ಬರು ಸಹೋದರರು, ಓರ್ವ ಸಹೋದರಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.

Leave a Reply