ಸಮಾಜ ಸೇವಕ ಈಶ್ವರ್ ಮಲ್ಪೆ ಅವರಿಗೆ ಶ್ರೀ ವಿನಾಯಕ ಸಾಧನಶ್ರೀ ಪುರಸ್ಕಾರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಶ್ರೀ ವಿನಾಯಕ ಯುವಕ ಮಂಡಲ(ರಿ)ಸಾಬ್ರಕಟ್ಟೆ-ಯಡ್ತಾಡಿ ಕೊಡಮಾಡುವ ೨೦೨೩ನೇ ಸಾಲಿನ ಶ್ರೀವಿನಾಯಕ ಸಾಧನಶ್ರೀ ಪುರಸ್ಕಾರಕ್ಕೆ ಈಜುಪಟು, ಮುಳುಗು ತಜ್ಞ, ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಅಪತ್ಭಾಂಧವ ಈಶ್ವರ್ ಮಲ್ಪೆ ಅವರನ್ನು ಆಯ್ಕೆ ಮಾಡಲಾಗಿದೆ.

Call us

Click Here

900ಕ್ಕೂ ಮಿಕ್ಕಿ ಶವವನ್ನು ಮೇಲೆಕೆತ್ತಿದ, ಅದೆಷ್ಟೋ ಜೀವಗಳನ್ನು ರಕ್ಷಿಸಿದ, ಬಂದರಿನಲ್ಲಿ ಮುಳುಗಿದ ವಾಹನಗಳನ್ನು, 200ಕ್ಕೂ ಮಿಕ್ಕಿ ಮೊಬೈಲ್ ಪೋನುಗಳನ್ನು, ಬೋಟುಗಳ ಬಿಡಿ ಭಾಗಗಳನ್ನು ಮೇಲೆ ತರುವಲ್ಲಿ ಅವರ ಸಾಹಸ ಅನನ್ಯವಾದುದು. ಇಂತಹ ಸಾಹಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಈಶ್ವರ್ ಮಲ್ಪೆ ಅವರನ್ನು ೨೦೨೩ನೇ ಸಾಲಿನಲ್ಲಿ ಆಯ್ಕೆ ಮಾಡಲಾಗಿದೆ.

ಪುರಸ್ಕಾರ ಪ್ರದಾನ ಕಾರ್ಯಕ್ರಮ ಆಕ್ಟೋಬರ್ 20ರ ಸಂಜೆ 7:30ಕ್ಕೆ ಮಹಾತ್ಮ ಗಾಂಧಿ ಫ್ರೌಡಶಾಲೆಯಲ್ಲಿ ಸಾಬ್ರಕಟ್ಟೆಯಲ್ಲಿ ನಡೆಯುವ ಶ್ರೀ ಸಾರ್ವಜನಿಕ ಶಾರದೋತ್ಸವದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯತಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದೆಂದು ಯುವಕ ಮಂಡಲದ ಅಧ್ಯಕ್ಷ ನಂದೀಶ್ ನಾಯ್ಕ, ಕಾರ್ಯದರ್ಶಿ ರಾಜೇಶ್ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply