ದುಬೈನಲ್ಲಿ ಕುಂದಗನ್ನಡ ಉತ್ಸವ: ಮೂವರು ಎಲೆಮರೆಯ ಸಾಧಕರಿಗೆ ಕುಂದಾಪ್ರ ಕನ್ನಡ ರತ್ನ ಪ್ರಶಸ್ತಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಆಯೋಜಿಸಲಾಗುತ್ತಿರುವ ಕುಂದಗನ್ನಡ ಉತ್ಸವದಲ್ಲಿ ಮೂವರು ಎಲೆಮರೆಯ ಸಾಧಕರಿಗೆ ಕುಂದಾಪ್ರ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Call us

Click Here

ಗೋಪ್ರೇಮಿ ಸಮಾಜ ಸೇವಕ ಸಂಜೀವ ದೇವಾಡಿಗ, ಪಡುಕೋಣೆಯ ಖ್ಯಾತ ನಾಟಿ ವೈದ್ಯ ಮ್ಯಾಕ್ಸಿಮ್ ಒಲಿವೆರಾ ಹಾಗೂ ಜೀವರಕ್ಷಕ ಮುಳುಗುತಜ್ಞ ದಿನೇಶ್ ಖಾರ್ವಿ ಅವರನ್ನು ಕುಂದಾಪ್ರ ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪಡುಕೋಣೆ ನಿವಾಸಿ ಮಾಕ್ಷಿಮ್ ಒಲಿವೆರಾ ಅವರು ಕಳೆದ 25 ವರ್ಷಗಳಿಂದ ನಾಟಿ ಔಷಧವನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಾ ಬರುತ್ತಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿಯೇ ಪ್ರಕೃತಿಯಲ್ಲಿ ಸಿಗುವ ಔಷಧ ಗಿಡಗಳ ಮಾಹಿತಿಯನ್ನು ಪಡೆದುಕೊಂಡು ಕ್ರಮೇಣ ತಂದೆಯ ಕಾಲದ ನಂತರ ಸ್ವತಂತ್ರವಾಗಿ ನಾಟಿ ಔಷಧವನ್ನು ನೀಡುತ್ತಾ ಬಂದಿದ್ದಾರೆ. ಅವರಿಂದ ವಿವಿಧ ರೋಗಗಳಿಗೆ ಔಷಧ ಪಡೆದುಕೊಳ್ಳಲು ದೂರದ ಊರುಗಳಿಂದಲೂ ರೋಗಿಗಳು ಅರಸಿ ಬರುತ್ತಾರೆ.

ಸಂಜೀವ ದೇವಾಡಿಗ ಅವರು ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್. ಆದರೆ ರಸ್ತೆಯಲ್ಲಿ ಅಪಘಾತಕ್ಕೀಡಾಗುವ ಅನಾಥ ಗೋವುಗಳಿಗೆ ಸಂಜೀವ ದೇವಾಡಿಗರೇ ಆಪತ್ಪಾಂದವ. ಬೈಂದೂರಿನಿಂದ ಉಪ್ಪುಂದ ಕಂಬದಕೋಣೆ ತನಕವೂ ಅಪಘಾತಕ್ಕೀಡಾಗುವ ದನಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಬದುಕಿಸಿದ್ದಾರೆ. ಎರಡು ದಶಕದಿಂದ ಸದ್ದಿಲ್ಲದೇ ತಮ್ಮ ಸೇವೆಯನ್ನು ಮುಂದುವರಿಸಿರುವ ಸಂಜೀವ ದೇವಾಡಿಗ ಅವರು ಇತ್ತೀಚಿಗೆ ಅಪಘಾತಕ್ಕೀಡಾದ ಗೋವುಗಳಿಗೆ ಆರೈಕೆ ಮಾಡುವ ಸಲುವಾಗಿ ತಮ್ಮ ಗ್ಯಾರೇಜ್ ಎದುರೇ ಶೆಟ್ ನಿರ್ಮಿಸಿಕೊಂಡು ಗೋವುಗಳನ್ನು ಸಲಹುತ್ತಿದ್ದಾರೆ.

ಗಂಗೊಳ್ಳಿ ನಿವಾಸಿಯಾಗಿರುವ ದಿನೇಶ್ ಖಾರ್ವಿ ಅವರು ನದಿ ಹಾಗೂ ಸಮುದ್ರಕ್ಕೆ ಬಿದ್ದು ಹತ್ತಾರು ಶವಗಳನ್ನು ಹುಡುಕಿ ಮೇಲೆತ್ತುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. ಪಂಚಗಂಗಾವಳಿ ನದಿ ಹಾಗೂ ಸಮುದ್ರ ತೀರದಲ್ಲಿ ಇಂತಹ ಅವಘಡಗಳು ಸಂಭವಿಸಿದಾಗ ಜನರು ನೆನಪಿಸಿಕೊಳ್ಲುವ ವ್ಯಕ್ತಿ ಎಲೆಮರೆಯ ಕಾಯಿಯಂತೆ ನಿರಂತರವಾಗಿ ತಮ್ಮ ಸೇವೆ ಮಾಡುತ್ತಾ ಬರುತ್ತಿದ್ದಾರೆ.

Click here

Click here

Click here

Click Here

Call us

Call us

► ದುಬೈನಲ್ಲಿ ಕುಂದಗನ್ನಡ ಉತ್ಸವ – 2023: ಮಂದರ್ತಿ ಮೇಳದ ಯಕ್ಷಗಾನ, ಸಾಧಕರಿಗೆ ಸನ್ಮಾನ – https://kundapraa.com/?p=69428 .

Leave a Reply