ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ನಾರಾಯಣ ಗುರು ಯುವಕ ಮಂಡಲ ವತಿಯಿಂದ ನವರಾತ್ರಿ ಪ್ರಯುಕ್ತ ಕುಂದಾಪುರ ದಸರಾ ನಡೆಯುತ್ತಿದ್ದು ಇಲ್ಲಿನ ನಾರಾಯಣ ಗುರು ಕಲ್ಯಾಣ ಮಂದಿರದಲ್ಲಿ ಶ್ರೀ ದೇವಿ ಪೂಜಾಕೈಂಕರ್ಯಗಳು ಜರುಗಿತು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಕುಟುಂಬಿಕರು ನಡೆಸಿದ ಚಂಡಿಕಾ ಯಾಗ ಸಂಪನ್ನಗೊಂಡಿದ್ದು ಯಾಗದ ಪೂರ್ಣಾಹುತಿ ವೇಳೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಕೋಡಿ ಇದ್ದರು. ಯೋಗೇಶ್ ಪೂಜಾರಿ, ಕುಟುಂಬಿಕರಿಂದ ಭಾನುವಾರ ಅನ್ನಸಂತರ್ಪಣೆ ನಡೆಯಿತು.