ಕುಂದಾಪುರ: ವಂಡ್ಸೆ ಗ್ರಾಮದ ಹಳಂಡಿಯ ಪುರಾಣ ಪ್ರಸಿದ್ಧ ವನದುರ್ಗಾಪರಮೇಶ್ವರಿ(ಕಾನಮ್ಮ) ದೇವಸ್ಥಾನ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಜೀರ್ಣೋದ್ಧಾರ ಪ್ರಕ್ರಿಯೆಯ ಅಂಗವಾಗಿ ಶಿಲಾ ಕೆತ್ತನೆಗೆ ಅ.22ರಂದು ಚಾಲನೆ ನೀಡಲಾಯಿತು.
ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವಂಡ್ಸೆ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಶ್ರೀಧರ ಶೆಟ್ಟಿ, ವನದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಚಂದ್ರಶೇಖರ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ.ಕೆ.ಶಿವರಾಮ ಶೆಟ್ಟಿ, ಕಾರ್ಯದರ್ಶಿ ಶಶಿಧರ ಶೆಟ್ಟಿ, ಕೋಶಾಧಿಕಾರಿ ಬೆಳ್ವೆ ಆನಂದ ಶೆಟ್ಟಿ, ಕುಂದಾಪುರ ಭೂ ಬ್ಯಾಂಕ್ ಅಧ್ಯಕ್ಷ ಎಸ್.ದಿನಕರ ಶೆಟ್ಟಿ, ಕಟ್ಟೆಮನೆ ರತ್ನಾಕರ ಶೆಟ್ಟಿ, ತೊಂಭತ್ತು ನಾರಾಯಣ ಶೆಟ್ಟಿ, ಬಿ.ಕರುಣಾಕರ ಶೆಟ್ಟಿ ಶಿರಾ, ವಂಡ್ಸೆ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕ ಎನ್.ರತ್ನಾಕರ ಶೆಟ್ಟಿ, ತಿರುಮಲ ಲಕ್ಞ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಗಣೇಶ ವಿ.ನಾಯ್ಕ್, ಗೋಪಾಲಕೃಷ್ಣ ಉಪಾದ್ಯ, ಹಾಲು ಉತ್ಪಾದಕರ ಸಹಕಾರಿಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ, ಗ್ರಾ.ಪಂ.ಸದಸ್ಯ ಉದಯ ನಾಯ್ಕ್, ಸುರೇಂದ್ರ ಶೆಟ್ಟಿ, ಗುತ್ತಿಗೆದಾರರಾದ ಹರ್ಜಿ ಕರುಣಾಕರ ಶೆಟ್ಟಿ, ರುದ್ರಯ್ಯ ಆಚಾರ್ಯ ಆತ್ರಾಡಿ, ಮಂಜಯ್ಯ ಶೆಟ್ಟಿ ಕೆಳಮನೆ, ಶಿಕ್ಷಕ ವಸಂತರಾಜ್ ಶೆಟ್ಟಿ, ವಂಡ್ಸೆ ಸಿ.ಎ ಬ್ಯಾಂಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ದಾಮೋದರ ಕುಕ್ಕೆಶ್ರೀ, ಕಂದಾಯ ಇಲಾಖೆಯ ರಾಜೀವ ಭಂಡಾರಿ, ಆತ್ರಾಡಿ ಹರ್ಷವರ್ಧನ ಹೆಗ್ಡೆ ಕೈಕಾಣ, ಆಶೀರ್ವಾದ್ ಫ್ರೆಂಡ್ಸ್‌ನ ಮಹೇಶ ಗಾಣಿಗ, ವಿಜಯ್, ಶೇಷಗಿರಿ ಆಚಾರ್ಯ, ಗ್ರಾಮ ಸಹಾಯಕ ಗಿರೀಶ್ ಎನ್.ನಾಯ್ಕ್, ಧ.ಗ್ರಾ ಯೋಜನೆ ಸೇವಾ ಪ್ರತಿನಿಧಿ ಲಾಲಿಸೋಜನ್, ಒಕ್ಕೂಟದ ಅಧ್ಯಕ್ಷೆ ಜಯಂತಿ ಪಿ.ಶೆಟ್ಟಿ, ಶಂಕರ ಆಚಾರ್ಯ ಟೈಲರ್, ಶಿಲ್ಪಿ ರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ವೇ.ಮೂ.ಸುರೇಶ ಐತಾಳ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಬಹು ಪ್ರಾಚೀನವಾದ ಈ ಕ್ಷೇತ್ರ ಸುಮಾರು 70 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿದೆ.